Header Ads
Header Ads
Breaking News

ಕಟ್ಟಡ ತ್ಯಾಜ್ಯ ಹಾಗೂ ತೆರವುಗೊಂಡ ಕಟ್ಟಡಗಳ ತ್ಯಾಜ್ಯಗಳ ಪುನರ್ ಬಳಕೆ . ಮಂಗಳೂರಿನ ಓಶಿಯನ್ ಪರ್ಲ್‌ನ ಹೋಟೆಲ್‌ನಲ್ಲಿ ಕಾರ್ಯಾಗಾರ.

ದಕ್ಷಿಣ ಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರ ವತಿಯಿಂದ ಕಟ್ಟಡ ತ್ಯಾಜ್ಯಗಳ ಹಾಗೂ ತೆರವುಗೊಂಡ ಕಟ್ಟಡಗಳ ತ್ಯಾಜ್ಯಗಳ ಪುನರ್ ಬಳಕೆ ಕುರಿತು ಕಾರ್ಯಾಗಾರವನ್ನು ಮಂಗಳೂರಿನಲ್ಲಿ ನಡೆಸಲಾಯ್ತು,ನಗರದ ಓಶಿಯನ್ ಪರ್ಲ್‌ನ ಹೋಟೆಲ್ ನಲ್ಲಿ ನಡೆದ ಕಾರ್ಯಾಗಾರವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಉದ್ಘಾಟಿಸಿದ್ರು, ಬಳಿಕ ಮಾತನಾಡಿದ ಅವರು, ಕಟ್ಟಡ ತ್ಯಾಜ್ಯಗಳ ಸಾಮಾಗ್ರಿಗಳ ಪುನರ್ ಬಳಕೆ ತಂತ್ರಜ್ಞಾನದ ಮಾಹಿತಿಯನ್ನು ಜನರ ಬಳಿ ತಲುಪಿಸುವ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು.

ಬಳಿಕ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ|ಎಂ.ಆರ್.ರವಿ ಮಾತನಾಡಿ, ತ್ಯಾಜ್ಯಗಳ ಸಂಗ್ರಹಣಾ ಒಂದು ಸವಾಲು ಆಗಿದೆ. ಈ ತಂತ್ರಜ್ಞಾನ ಪರಿಸರಸ್ನೇಹಿ ಆಗುವ ನಿಟ್ಟಿನಲ್ಲಿ ಬಳಕೆ ಮಾಡಬೇಕಾಗಿದೆ ಎಂದು ಹೇಳಿದರು.ಈ ವೇಳೆ ಎನ್‌ಐಟಿಕೆ ಪ್ರೋ. ಕಟ್ಟ ವೆಂಕಟರಮಣ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ರಾಜೇಂದ್ರ ಕಲ್ಬಾವಿ ಸೇರಿದಂತೆ ಇನ್ನಿತರು ಉಪಸ್ಥಿತಿರಿದ್ದರು.

Related posts

Leave a Reply