Header Ads
Header Ads
Breaking News

ಕಟ್ಟಡ ಮಾಲಕನ ಎಡವಟ್ಟು ಪೇಚಾಟದಲ್ಲಿ ಸಿಲುಕಿದ ಫ್ಲಾಟ್ ಮಾಲಕರು

ಮಂಜೇಶ್ವರ ರಾಗಂ ಜಂಕ್ಷನಿನ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಖಾಸಗೀ ಬಾಡಿಗೆ ವಸತಿ ಗೃಹಗಳ ಕಟ್ಟಡ ಮಾಲಕನ ಎಡವಟ್ಟಿನಿಂದಾಗಿ ರಾಗಂ ಜಂಕ್ಷನ್ ಸಾರ್ವಜನಿಕ ಪರಿಸರದ ವ್ಯಾಪಾರಿಗಳು, ಆಟೋ ಚಾಲಕರು ಹಾಗೂ ಪ್ರಯಾಣಿಕರು ಕೊಳಚೆ ನೀರಿನ ದುರ್ವಾಸನೆಯಿಂದಾಗಿ ಸಾಂಕ್ರಾಮಿಕ ರೋಗದ ಭೀತಿಯನ್ನು ಎದುರಿಸುತ್ತಿರುವಂತಾಗಿದೆ.ಮಂಜೇಶ್ವರ ಗ್ರಾ. ಪಂ. ಬೋರ್ಡ್ ಸಭೆಯಲ್ಲಿ ಕಟ್ಟಡ ಮಾಲಕರಿಗೆ ನೋಟೀಸು ನೀಡಿ ಬಳಿಕ ಕ್ರಮಕ್ಕೆ ಮುಂದಾಗಲು ತೀರ್ಮಾನಿಸಿದ್ದರೂ ಯಾವುದೇ ಪರಿಹಾರವನ್ನು ಕಂಡು ಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಕಟ್ಟಡದ ಮಾಲಕ ಕಟ್ಟಡಕ್ಕೆ ನಂಬ್ರವನ್ನು ಪಡೆದಿರಲಿಲ್ಲ. ಆದರೆ ವಿದ್ಯುತ್ ಸಂಪರ್ಕ ಲಭಿಸಿತ್ತು. ಕಟ್ಟಡ ನಂಬ್ರ ಇಲ್ಲದೆ ಹೇಗೆ ವಿದ್ಯುತ್ ಸಂಪರ್ಕ ಲಭಿಸಿತ್ತೆಂಬುದು ಸಾರ್ವಜನಿಕರ ಪ್ರಶ್ನೆ.

 

ಜೊತೆಯಾಗಿ ಸಾರ್ವಜನಿಕ ಸ್ಥಳದಲ್ಲೇ ಕೊಳವೆ ಬಾವಿಯನ್ನು ಕೊರೆದು ಕಟ್ಟಡಕ್ಕೆ ನೀರನ್ನು ನಿಡಲಾಗಿದೆ. ಬಹುತೇಕ ಕೆಲಸವನ್ನೂ ಸಂಬಂಧಪಟ್ಟ ಅಧಿಕಾರಿಗಳಿಗೆ ಲಂಚವನ್ನು ನೀಡಿ ಅನಧಿಕೃತವಾಗಿ ಮಾಡಿರುವುದು ಬಹುತೇಕ ಖಚಿತವೆಂಬಂತೆ ತೋರುತ್ತಿರುವುದಾಗಿ ಸ್ಥಳೀಯರ ಆರೋಪ. ಅ ಬಳಿಕ ಕಟ್ಟಡದಲ್ಲಿರುವ ಫ್ಲಾಟ್ ಗಳೆಲ್ಲವನ್ನೂ ಮಾರಾಟ ಮಾಡಲಾಗಿದೆ. ಇದೀಗ ಈ ಫ್ಲಾಟ್ ಗಳಿಂದ ಹರಿದು ಬರುತ್ತಿರುವ ತ್ಯಾಜ್ಯ ನೀರು ಸಾರ್ವಜನಿಕ ಸ್ಥಳದಲ್ಲಿ ಹರಿದು ಬರುತಿದ್ದು, ಇದರ ದುರ್ನಾತದಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಡೆದಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಈ ಬಗ್ಗೆ ಈಗಾಗಾಲೇ ವ್ಯಾಪಾರಿ ಸಂಘಟನೆ ನ್ಯಾಯಾಲಯದಲ್ಲಿ ದೂರನ್ನು ದಾಖಲಿಸಿರುವುದಾಗಿ ಊರವರು ತಿಳಿಸಿದ್ದಾರೆ.ಇದೇ ಪರಿಸರದ ಇಬ್ಬರು ಡೆಂಗ್ಯೂ ಬಾಧಿಸಿ ಆಸ್ಪತ್ರೆಯಲ್ಲಿದಾರೆಂಬ ಮಾಹಿತಿ ಕೂಡಾ ಲಭಿಸಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶಿತರಾದ ಸ್ಥಳಿಯ ನಾಗರಿಕರು ಪಂ.ಗೆ ಹಲವು ಸಲ ದೂರನ್ನು ನೀಡಿರುವ ನಿಟ್ಟಿನಲ್ಲಿ ಗುರುವಾರದಂದು ಸೇರಿದ ಗ್ರಾ. ಪಂ. ಸಭೆಯಲ್ಲಿ ಶುಕ್ರವಾರದಂದು ನೋಟೀಸನ್ನು ಲಗತ್ತಿಸಿ ಒಂದು ವಾರದೊಳಗೆ ಕ್ರಮಕ್ಕೆ ಮುಂದಾಗುವ ನಿರ್ಣಯಕ್ಕೆ ಅಂಗೀಕಾರ ನೀಡಿರುವುದಾಗಿ ಪಂ. ಅಧ್ಯಕ್ಷ ಅಝೀಝ್ ಹಾಜಿಯವರು ತಿಳಿಸಿದ್ದಾರೆ. ಸ್ವಚ್ಚ ಭಾರತ ಎಂದು ಹೇಳುತ್ತಿರುವ ಕೇಂದ್ರ ಸರಕಾರ ಅದೇ ಸ್ವಚ್ಚವನ್ನು ಪಾಲಿಸಲು ತಾಕೀತು ನೀಡುತ್ತಿರುವ ರಾಜ್ಯ ಸರಕಾರ ಅದೇ ಸರಕಾರ ನೇಮಕ ಗೊಳಿಸಿದ ಆರೋಗ್ಯಾಧಿಕಾರಿಗಳು ಇವರೆಲ್ಲಾ ಕಂಡೂ ಕಾಣದ ಜಾಣ ಕುರುಡಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆರೋಪಕ್ಕೆ ಬಲವಾದ ಪುಷ್ಟಿಯನ್ನು ನೀಡುತ್ತಿರುವುದಾಗಿ ಹಿರಿಯ ನಾಗರಿಕರೊಬ್ಬರು ಹೇಳುತಿದ್ದಾರೆ.

Related posts

Leave a Reply