Header Ads
Header Ads
Breaking News

ಕಡಬದಲ್ಲಿ ರಮೇಶ್ ಭಟ್ ಕಲ್ಪುರೆಗೆ ಹಲ್ಲೆ ಹಿನ್ನೆಲೆ ಇದೀಗ ವೈರಲ್ ಆಗುತ್ತಿರುವ ಸಿಸಿಟಿವಿ ದೃಶ್ಯಾವಳಿ

 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಡಬದಲ್ಲಿ ಕಡಬ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ರಮೇಶ್ ಭಟ್ ಕಲ್ಪುರೆಗೆ ತಂಡವೊಂದು ಆದಿತ್ಯವಾರದಂದು ಗಂಭೀರ ಹಲ್ಲೆ ನಡೆಸಿರುವ ಸಿಸಿ ಟಿ ವಿ ದೃಶ್ಯ ವೈರಲ್ ಆಗಿದೆ.
ಕೃಷಿಕರಾಗಿದ್ದುಕೊಂಡು ಸಾಮಾಜಿಕ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿದ್ದ ರಮೇಶ್ ಭಟ್ ಕಡಬದ ಯಶೋದಾ ಸೂಪರ್ ಮಾರ್ಕೆಟ್‌ಗೆ ತೆರಳಿ ಸಾಮಾಗ್ರಿ ಖರೀದಿಸಿ ತನ್ನ ಜೀಪಿನ ಹತ್ತಿರ ಆಗಮಿಸಿದ ಸಂದರ್ಭದಲ್ಲಿ ಏಕಾ‌ಏಕಿ ಮುಗಿಬಿದ್ದ ಆಕ್ರಮಣಕಾರರು ಯದ್ವಾತದ್ವಾ ಹಲ್ಲೆ ನಡೆಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಾದ ಕುಟ್ರುಪ್ಪಾಡಿ ಪರಿಸರದ ಪ್ರಕಾಶ, ಟಿನ್ಸನ್, ಸನೂಷ್, ಲಿಜೋ, ಸಂತೋಷ್ ಎಂಬವರನ್ನು ಬಂಧಿಸಿದ್ದರು.

Related posts

Leave a Reply