Header Ads
Breaking News

ಕಡಬ ಅರಣ್ಯಾಧಿಕಾರಿಗಳ ದೌರ್ಜನ್ಯ ಆರೋಪ : ರಕ್ತ ಚಳುವಳಿ ಹೆಸರಿನಲ್ಲಿ ಕೈ ಕೊಯ್ದು ರಕ್ತ ಸುರಿಸಿದ ಪ್ರತಿಭಟನಾಕಾರರು

ಕಡಬ ಅರಣ್ಯಾಧಿಕಾರಿಗಳ ದೌರ್ಜನ್ಯದ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹವು ಮತ್ತೆ ಮುಂದುವರೆದಿದೆ
ನಿನ್ನೆ ರಕ್ತ ಚಳುವಳಿ ಹೆಸರಿನಲ್ಲಿ ಮೊದಲು ನೀತಿ ತಂಡದ ರಾಜ್ಯಾಧ್ಯಕ್ಷ ಜಯಂತ್ ಟಿ ಅವರು ಬ್ಲೇಡ್ ನಲ್ಲಿ ತನ್ನ ಬೆರಳಿನ ತುದಿಯನ್ನು ಬ್ಲೇಡ್ ಮೂಲಕ ಕೊಯ್ದು ಕೊಂಡು ,ಆ ರಕ್ತದಲ್ಲಿ ಎಫ್‍ಐಆರ್ ದಾಖಲಿಸಿ ನ್ಯಾಯಕೊಡಿ, ಅಧಿಕಾರಿಯವರೆ ನಮ್ಮನ್ನು ಬಲಿಕೊಡದಿರಿ ಎಂದು ಬರೆದುಕೊಂಡಿದ್ದಾರೆ.


ಅಧಿಕಾರಿಗಳ ಮೇಲೆ ಕೇಸು ದಾಖಲಿಸಿ ಇಲ್ಲವೇ ಕೇಸು ದಾಖಲಿಸಲು ಸಾಧ್ಯವಿಲ್ಲ ಎಂದು ಲಿಖಿತವಾಗಿ ಬರೆದುಕೊಡಿ ಎಂದು ಅಧಿಕಾರಿಗಳ ಮುಂದೆ ಬೇಡಿಕೆ ಸಲ್ಲಿಸಿದ್ದಾರೆ. ಈ ಬಗ್ಗೆ ಸ್ಪಷ್ಟ ನಿಲುವನ್ನು ಜಿಲ್ಲಾಡಳಿತ ನೀಡದ ಹಿನ್ನೆಲೆಯಲ್ಲಿ ಈ ಧರಣಿ ಮುಂದುವರೆದಿದೆ. ಉನ್ನತ ಅರಣ್ಯ ಅಧಿಕಾರಿಗಳು ಹೋರಾಟಗಾರರ ಕರೆ ಸ್ವೀಕರಿಸದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

Related posts

Leave a Reply

Your email address will not be published. Required fields are marked *