Header Ads
Header Ads
Breaking News

ಕಡಲಕೆರೆಯಲ್ಲಿ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನಕ್ಕೆ ಶಂಕು ಸ್ಥಾಪನೆ ಅರಣ್ಯ ಯೋಜನೆಯಡಿ 1.55 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಔಷಧೀಯ ಸಸ್ಯಕ್ಷೇತ್ರ ಉದ್ಘಾಟಿಸಿದ ಶಾಸಕ ಆಭಯಚಂದ್ರ ಜೈನ್

ಮೂಡುಬಿದಿರೆ: ನಿಸರ್ಗಧಾಮವಾಗಿ ಅಭಿವೃದ್ಧಿ ಹೊಂದುತ್ತಿರುವ ಕಡಲಕೆರೆಯಲ್ಲಿ ಅರಣ್ಯ ಇಲಾಖೆಯಿಂದ ಸಾಮಾಜಿಕ ಅರಣ್ಯ ಯೋಜನೆಯಡಿ 1.55 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನಕ್ಕೆ ಬುಧವಾರ ಶಂಕು ಸ್ಥಾಪನೆ ನೆರವೇರಿಸಿದ ಶಾಸಕ ಕೆ. ಅಭಯಚಂದ್ರ ಜೈನ್ ಅವರು ಔಷಧೀಯ ಸಸ್ಯಕ್ಷೇತ್ರವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ನಾಗರಿಕರು ಆರೋಗ್ಯವಂತರಾಗಿರಬೇಕಾದರೆ ಪ್ರಕೃತಿ ಉಳಿಯಬೇಕು. ಈ ನಿಟ್ಟಿನಲ್ಲಿ ಕಡಲಕೆರೆಯನ್ನು ನಿಸರ್ಗಧಾಮವನ್ನಾಗಿ ರೂಪಿಸುತ್ತಿದ್ದು ಹಸುರೀಕರಣಗೊಳಿಸುವ ಮೂಲಕ ಇಲ್ಲಿನ ಸೌಂದರ್ಯವನ್ನು ವೃದ್ಧಿಸುವ ಕೆಲಸ ನಡೆಯುತ್ತಿದೆ ಎಂದರು.ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಪ್ರಭಾಕರನ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಲೆಗ್ಸಾಂಡರ್, ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ಭಟ್ ಪುರಸಭಾಧ್ಯಕ್ಷೆ ಹರಿಣಾಕ್ಷಿ ಎಸ್ ಸುವರ್ಣ, ಉಪಾಧ್ಯಕ್ಷ ವಿನೋದ್ ಸೆರಾವೋ, ಮೂಡಾದ ಅಧ್ಯಕ್ಷ ಸುರೇಶ್ ಪ್ರಭು, ನಾರಾಯಣ ಪೂಜಾರಿ, ಹರೀಶ್ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

Related posts

Leave a Reply