Breaking News

ಕಡಲಿನಾಳದಲ್ಲಿ ಸುರುಳಿ ನಗರ, ಟೋಕಿಯೋ ಬಳಿ ಹೊಸ ಜನ ವಸತಿಗೆ ಸಿದ್ಧತೆ

ಒಂದಲ್ಲಾ ಒಂದು ದಿನ ಭೂಮಿ ಇಕ್ಕಾಟ್ಟಾಗುತ್ತದೆ. ಜೀವಿಸಲು ಸ್ಥಳವೇ ಇಲ್ಲದಂತಹ ಪರಿಸ್ಥಿತಿ ಎದುರಾಗುತ್ತದೆ. ಅಂತಹ ಪರಿಸ್ಥಿತಿ ಬಂದರೆ ಏನು ಮಾಡುವುದು?
ಅಂತರಿಕ್ಷದಲ್ಲಿ ಮನೆ ನಿರ್ಮಿಸುವ ಯೋಜನೆಗಳು ಅಷ್ಟೊಂದು ಫಲಪ್ರದವಾಗಿಲ್ಲ. ಆಕಾಶವನ್ನು ಬಿಟ್ಟರೆ ಉಳಿದದ್ದು ಸಮುದ್ರವೊಂದೆ. ಸಮುದ್ರದ ಮೇಲೆ ಈಗಾಗಲೇ ಕೆಲವು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆದರೆ. ಸಮುದ್ರದಾಳದಲ್ಲೂ ನಗರಗಳನ್ನು ನಿರ್ಮಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ವಿಜ್ಞಾನಿಗಳ ಈ ಮಾತನ್ನು ಈಗ ನಿಜಮಾಡಲು ಹೊರಟಿದೆ ಟೋಕಿಯೊದ ಷಿಮಿಜು ಕಾರ್ಪೊರೇಷನ್ ಎಂಬ ಕಟ್ಟಡ ನಿರ್ಮಾಣ ಸಂಸ್ಥೆ. ಎಲ್ಲವೂ ಅಂದುಕೊಂಡಂತೆ ಆದರೆ ೨೦೩೦ರ ವೇಳೆಗೆ ಸಮುದ್ರದಾಳದಲ್ಲಿ ‘ಸ್ಪೈರಲ್’ ನಗರ ನಿರ್ಮಿಸುತ್ತೇವೆ ಎಂದು ಸಂಸ್ಥೆಯ ಎಂಜಿನಿಯರ್ಸ್ ಹೇಳುತ್ತಿದ್ದಾರೆ.
ಷಿಮಿಜು ಸಂಸ್ಥೆ ನಿರ್ಮಿಸಲು ಉದ್ದೇಶಿಸಿರುವ ಕಡಲಾಳದ ನಗರದ ಕುರಿತು ಒಂದಿಷ್ಟು ಮಾಹಿತಿ ಹೀಗಿದೆ. ಟೋಕಿಯೊ ನಗರ ಸಮುದ್ರ ತೀರದೊಳಗೆ ನಿರ್ಮಾಣ. ಸಮುದ್ರದ ಅಲೆಗಳಿಂದ ಬಿಡುಗಡೆಯಾಗುವ ಶಕ್ತಿಯನ್ನೇ ವಿದ್ಯುತ್ಶಕ್ತಿಯಾಗಿ ಪರಿವರ್ತಿಸಿ ‘ಸ್ಪೈರಲ್’ ನಗರಕ್ಕೆ ಪೂರೈಸಲಾಗುತ್ತದೆ.
ಈಗಿರುವ ಕಟ್ಟಡ ನಿರ್ಮಾಣ ತಂತ್ರಜ್ಞಾನದಿಂದ ಸ್ಪೈರಲ್ ನಗರ ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ ಹೊಸ ತಂತ್ರಜ್ಞಾನವನ್ನು ಕಡಲಾಳದ ನಗರ ನಿರ್ಮಾಣಕ್ಕಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಷಿಮಿಜು ಸಂಸ್ಥೆ ತಿಳಿಸಿದೆ. ಕಡಲ ತಳದಿಂದ ಸುಮಾರು ೧೪ ಕಿಮೀ ಉದ್ದ ಸುರುಳಿಗಳನ್ನು ನಿರ್ಮಿಸಿ ಆ ಸುರುಳಿಯ ಮೇಲೆ ಗೋಳಗಳನ್ನು ಕಟ್ಟಲಾಗುತ್ತದೆ. ಈ ಗೋಳಗಳಲ್ಲಿ ಜನ ವಾಸಿಸಬಹುದು. ೫,೦೦೦ ಜನ ಒಂದು ಗೋಳದಲ್ಲಿ ವಾಸಿಸಬಹುದು. ಇದಕ್ಕೆ ವೆಚ್ಚವಾಗುವ ಹಣ ಒಂದೂವರೆ ಲಕ್ಷ ಕೋಟಿ.

Related posts

Leave a Reply