Header Ads
Header Ads
Header Ads
Breaking News

ಕಡಲುಪಾಲಾದ ಆಂದ್ರಪ್ರದೇಶದ ಶಾಹಿಚರಣ್ ಮೃತದೇಹ ಪತ್ತೆ

ಪಣಂಬೂರು ಬೀಚ್‌ನ ಮೀನಕಳಿಯಾ ನವಜ್ಯೋತಿ ಯುವಕ ಮಂಡಲದ ಬಳಿಯ ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದ ವೇಳೆ ನೀರಿನ ಅಲೆಗೆ ಸಿಲುಕಿ ಸಮುದ್ರ ಪಾಲಾದ ಶಾಹಿಚರಣ್ ಮೃತದೇಹ ಪತ್ತೆಯಾಗಿದೆ.
ಶಾಹಿಚರಣ್ ಮೂಲತ ಆಂದ್ರ ಪ್ರದೇಶ ತಿರುಪತಿ ನಿವಾಸಿಯಾಗಿದ್ದು, ಬೆಂಗಳೂರಿನ ಪಿಜಿಎಸ್ ಐಟಿ ಕಾಲೇಜಿನ 3ನೇ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಈತ ತನ್ನ ಸ್ನೇಹಿತರೊಂದಿಗೆ ಪಣಂಬೂರು ಬೀಚ್‌ಗೆ ಬಂದಿದ್ದ. ಈ ವೇಳೆ ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದ ಶಾಹಿಚರಣ್ ನೀರಿನ ಸೆಳೆತಕ್ಕೆ ಸಮುದ್ರ ಪಾಲಾಗಿದ್ದ. ಇದೀಗ ಶಾಹಿಚರಣ್ ಮೃತದೇಹ ಪತ್ತೆಯಾಗಿದೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಶರತ್

Related posts

Leave a Reply