Header Ads
Header Ads
Header Ads
Breaking News

ಕಡೇಶ್ಚಾಲ್ಯ ದೇವಾಸ್ಥಾನದಲ್ಲಿ ಕಳವು ಪ್ರಕರಣ ದೇವಳಕ್ಕೆ ಭೇಟಿ ನೀಡಿದ ಸಚಿವ ರಮಾನಾಥ ರೈ ಕ್ಷೇತ್ರದ ಪ್ರಧಾನ ಅರ್ಚಕರೊಂದಿಗೆ ಮಾತುಕತೆ

 

ಬಂಟ್ವಾಳ: ಇತ್ತಿಚೆಗೆ ಕಳ್ಳತನ ನಡೆದ ಮೊಗರ್ನಾಡು ಸಾವಿರ ಸೀಮೆಯ ಕಡೇಶ್ವಾಲ್ಯ ಚಿಂತಾಮಣಿ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದರು. ಕ್ಷೇತ್ರದ ಪ್ರಧಾನ ಅರ್ಚಕರೊಂದಿಗೆ ಮಾತುಕತೆ ನಡೆಸಿದ ಅವರು ಕಳ್ಳತನದ ಬಗ್ಗೆ ಮಾಹಿತಿ ಪಡದುಕೊಂಡರು.

 ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಐತಿಹಾಸಿಕ ಹಾಗೂ ವಿಶಿಷ್ಟ ಹಿನ್ನಲೆ ಹೊಂದಿರುವ ಕಡೆಶೀವಾಲ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವುದು ಭಕ್ತ ಜನರಲ್ಲಿ ನೋವುಂಟು ಮಾಡಿದೆ. ಸುಮಾರು 5 ಲಕ್ಷ ರುಪಾಯಿ ಮೊತ್ತದ ವಸ್ತುಗಳು ದೇವಸ್ಥಾನದಿಂದ ಕಳವಾಗಿದ್ದು ಆರೋಪಿಗಳನ್ನು ಶೀಘ್ರ ಪತ್ತೆ ಮಾಡುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಕಡೇಶಿವಾಲಯ ಸಾಮರಸ್ಯದ ಕೇಂದ್ರವಾಗಿದ್ದು ಕಳ್ಳರ ಪತ್ತೆ ವಿಶೇಷ ಪ್ರಯತ್ನವನ್ನು ನಡೆಸಲಿದ್ದೇವೆ ಎಂದರು. ಈ ಸಂದರ್ಭ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ. ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲಿ, ವಿಜಯ್ ಕಡೆಶ್ವಾಲ್ಯ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಮತ್ತಿತರರು ಹಾಜರಿದ್ದರು.

Related posts

Leave a Reply