Header Ads
Header Ads
Breaking News

ಕಣಚೂರು ಆಸ್ಪತ್ರೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ:ಯು. ಕಣಚೂರು ಮೋನು ಅವರಿಂದ ಧ್ವಜಾರೋಹಣ

ನಾಟೆಕಲ್ ಕಣಚೂರು ಶಿಕ್ಷಣ ಸಮೂಹ ಸಂಸ್ಥೆಗಳ ವತಿಯಿಂದ 70ನೇ ಗಣರಾಜ್ಯೋತ್ಸವ ಅಚರಿಸಲಾಯಿತು. ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟಿನ ಅಧ್ಯಕ್ಷ ಯು.ಕಣಚೂರು ಮೋನು ಧ್ವಜಾರೋಹಣಗೈದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗಣರಾಜ್ಯೋತ್ಸವ ದಿನದ ಮಹತ್ವವನ್ನು ಎಲ್ಲರೂ ಅರಿಯುವ ಮೂಲಕ ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕಿದೆ. ಗಣರಾಜ್ಯೋತ್ಸವ ದಿನ ಹಾಗೂ ಮಹಾನ್ ವ್ಯಕ್ತಿಗಳ ಸ್ಮರಣೆಯನ್ನು ನಡೆಸುವ ಮೂಲಕ ದೇಶಭಕ್ತಿಯನ್ನು ಜಾಗೃತಗೊಳಿಸಬೇಕು ಎಂದರು ಕಣಚೂರಿನ ಬಿ.ಕಾಂ ವಿದ್ಯಾರ್ಥಿನಿ ಫಾತಿಮತ್ ಮುಫೀದಾ ಗಣರಾಜ್ಯೋತ್ಸವ ಸಂದೇಶ ನೀಡಿದರು. ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟಿನ ನಿರ್ದೇಶಕ ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಿದ್ದರು. ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್, ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟಿನ ಸದಸ್ಯರಾದ ಝೊಹರಾ ಭಾನು, ಉಮಾಯಾ, ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಡೀನ್ ಡಾ. ಹೆಚ್.ಎಸ್ ವಿರೂಪಾಕ್ಷ, ಸಹಾಯಕ ಡೀನ್ ಡಾ.ಶ್ರೀಶಾ ಕಂಡಿಗ, ವೈದ್ಯಕೀಯ ಅಧೀಕ್ಷಕ ಡಾ. ದೇವಿಪ್ರಸಾದ್ ಶೆಟ್ಟಿ, ಸಹದಾ ರಹಿಮಾನ್, ಮಕ್ಕಳಾದ ಹಾಯ, ಮರ್ಯ ಮತ್ತು ಹಮ್ದಾನ್, ಕಣಚೂರು ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಶಾಂತಿ ಲೋಬೊ, ಅರೆವೈದ್ಯಕೀಯ ವಿಜ್ಞಾನ ಕಾಲೇಜುಗಳ ಪ್ರಾಂಶುಪಾಲೆ ವಿವಿಯನ್ ಡಿಸೋಜ, ಫಿಸಿಯೋಥೆರಪಿ ಕಾಲೇಜು ಪ್ರಾಂಶುಪಾಲ ಸುಹೈಲ್ ಖಾನ್, ಮ್ಯಾನೇಜ್‌ಮೆಂಟ್ ಸೈನ್ಸಸ್ ವಿಭಾಗದ ಪ್ರಾಂಶುಪಾಲ ಇಕ್ಬಾಲ್ ಅಹಮ್ಮದ್, ಕಣಚೂರು ಮಹಿಳೆಯರ ಪಿಯು ಕಾಲೇಜಿನ ಪ್ರಾಂಶುಪಾಲೆ ಹೇಮಲತಾ, ಕಣಚೂರು ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ವಿನಿತಾ ಮಥಾಯಸ್, ಪ್ರಾಥಮಿಕ ಶಾಲೆಯ ಪ್ರಾಂಶುಪಾಲೆ ಆನಂದಿ, ಲಿನ್ನೆಟ್, ಆಯೇಷಾ ಮನಾಲ್. ಹೇಮಲತಾ ಉಪಸ್ಥಿತರಿದ್ದರು.

Related posts

Leave a Reply