Header Ads
Breaking News

ಕಣಚೂರು ಆಸ್ಪತ್ರೆಯಲ್ಲಿ ಮುಖಾಂಗ ಶಸ್ತ್ರಚಿಕಿತ್ಸೆ; ಡಾ. ಮುಸ್ತಫಾ ಖಾದರ್

ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ಮುಖಾಂಗ ವಿಭಾಗದ ವತಿಯಿಂದ ಜನವರಿ 6ರಿಂದ 16ರವರೆಗೆ 11ದಿನ ನಡೆದ ಮುಖಾಂಗ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ 21 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಮುಖಾಂಗ ವಿಭಾಗ ಮುಖ್ಯಸ್ಥ ಡಾ. ಮುಸ್ತಫಾ ಖಾದರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅವರು, ಆಸ್ಪತ್ರೆಯ ಸಭಾಂಗಣದಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ, ಕಣಚೂರು ಆಸ್ಪತ್ರೆಯಲ್ಲೊ ಕ್ರೋನಿಯೋಫೇಶಿಯಲ್ ಅನಮೋಲೊಸಿಸ್ ವಿಭಾಗದಲ್ಲಿ ಮಾನ್ಯತೆ ಪಡೆದ ತಜ್ಣ ವೈದ್ಯರು, ಸುಸಜ್ಜಿತ ಚಿಕಿತ್ಸಾ ಕೇಂದ್ರವಿದ್ದು ಸೀಳು ತುಟಿ, ಸೀಳು ಅಂಗುಳ, ತಲೆ ಸರಿಪಿಡಿಸುವ ಶಸ್ತ್ರ ಚಿಕಿತ್ಸೆ, ತಲೆಬುರೆಡೆ, ಕುತ್ತಿಗೆ, ದವಡೆಗಳ ರಚನೆ ಮತ್ತು ಬೆಳವಣಿಗೆಗೆ ಸಂಬಂಧಿತ ಜನ್ಮಜಾತ ಮುಖ, ಸ್ವಾಧೀನಪಡಿಸಿಕೊಂಡಿರುವ ವಿರೂಪಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

ಆಸ್ಪತ್ರೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖಾಂಗ ತಜ್ಞರಾದ ಡಾ. ವೀರಬಾಹು, ಡಾ. ಜುವೊವರ್ ಲೋಬೋ, ಡಾ. ಪರಿತ್ ಲಡಾನಿ, ಡಾ. ಮನುಪ್ರಸಾದ್, ಡಾ. ಶ್ರೇಯಸ್ ಸೊರಕೆ, ಡಾ.ಕೃಷ್ಣಮೂರ್ತಿ ಹಾಗೂ ಡಾ.ಅಭಯ್ ಶಸ್ತ್ರಚಿಕಿತ್ಸಾ ತಂಡವಾಗಿ ಕಾರ್ಯನಿರ್ವಹಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಗೆ ಐದರಿಂದ ಏಳು ಲಕ್ಷ ರೂ. ವೆಚ್ಚ ತಗುಲಲಿದೆ. ಆದರೆ ಕಣಚೂರು ಆಸ್ಪತ್ರೆಯಲ್ಲಿ 70ಸಾವಿರದಿಂದ ಒಂದೂವರೆ ಲಕ್ಷ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗಿದೆ. ಇಂತಹ ಎಲ್ಲಾ ಪ್ರಕರಣದಲ್ಲಿ ಸರ್ಕಾರದ ಅನುದಾನ ಸಿಗುತ್ತದೆ ಎನ್ನಲು ಅಸಾಧ್ಯ. 650 ಹಾಸಿಗೆಗಳನ್ನು ಹೊಂದಿರುವ ಕಣಚೂರು ಆಸ್ಪತ್ರೆ ಕೇವಲ ಐದು ವರ್ಷಗಳಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದೆ. ದಿನದ 24 ಗಂಟೆಯೂ ವೈದ್ಯಕೀಯ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಸೇವೆಗಳ ಮೂಲಕ ಮೂಲಕ ಸಾರ್ವಜನಿಕರಿಗೆ ಸೇವೆ ನೀಡುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಯು.ಕೆ. ಮೋನು, ನಿರ್ದೇಶಕ ಅಬ್ದುಲ್ ರಹ್ಮಾನ್ ಕಣಚೂರು, ವಿಭಾಗದ ವೈಸ್ ಡೀನ್ ಡಾ. ಶ್ರೀಷ ಕಂಡಿಗೆ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್, ಡಾ.ಪ್ರವೀಣ್ ಆಚಾರ್ ಹಾಗೂ ಡಾ.ಮನೀಶ್ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *