Header Ads
Breaking News

ಕಣಚೂರು ಆಸ್ಪತ್ರೆಯಲ್ಲಿ ‘ಲೈವ್ ಸರ್ಜಿಕಲ್’ ಕಾರ್ಯಾಗಾರ’

ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಕ್ರಾನಿಯೋಫೇಶಿಯಲ್ ಲೈವ್ ಸರ್ಜಿಕಲ್ ಕಾರ್ಯಾಗಾರ ಅಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.ಪ್ರಖ್ಯಾತ ಶಸ್ತ್ರಚಿಕಿತ್ಸಕರಾದ ಡಾ.ವೀರಬಾಹು ಕ್ರಾನಿಯೋಫೇಶಿಯಲ್ ಲೈವ್ ಸರ್ಜಿಕಲ್ ಕಾರ್ಯಾಗಾರವನ್ನು ಉದ್ಘಾಟಿಸಿದರು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಡಾ.ವೀರಬಾಹು ಅವರು, ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಬಹಳಷ್ಟು ಸಂಶೋಧನಾ ಕಾರ್ಯಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನಡೆಯುತ್ತಿರುವ ಕಾರ್ಯಾಗಾರವೂ ಮಹತ್ತ್ವದ್ದಾಗಿದೆ ಎಂದು ಹೇಳಿದರು.

ಕಣಚೂರು ಸಮೂಹ ಸಂಸ್ಥೆ ಅಧ್ಯಕ್ಷ ಯು.ಕೆ ಕಣಚೂರು ಮೋನು ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಸ್ತ್ರಚಿಕಿತ್ಸೆ ವಿಷಯದಲ್ಲಿ ನಡೆಯುತ್ತಿರುವ ಇಂತಹ ಕಾರ್ಯಾಗಾರ ಬಹಳಷ್ಟು ಪ್ರಕರಣಗಳನ್ಬು ಬೇದಿಸಬಲ್ಲುದು. ಇಂತಹ ಕಾರ್ಯಕ್ರಮಗಳಿಗೆ ಹಾಗೂ ಸಂಶೋಧನಾ ಚಟುವಟಿಕೆ ಗಳಿಗೆ ಕಣಚೂರು ಸಂಸ್ಥೆ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದರು. ಕಾರ್ಯಾಗಾರದಲ್ಲಿ ಕ್ರಾನಿಯೋಫೇಶಿಯಲ್ ವಿಭಾಗದ ಮುಖ್ಯಸ್ಥ ಡಾ.ಮುಸ್ತಫಾ ಅವರು ಕಾರ್ಯಾಗಾರದ ಮಹತ್ವದ ಬಗ್ಗೆ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಜಿಯೋವರ್ ಲೋಬೋ, ಡಾ.ಪರಿತ್ ಲಡಾನಿ, ಡಾಮನುಪ್ರಸಾದ್, ಡಾ.ಶ್ರೇಯಸ್ ಸೊರಕೆ, ಡಾ ಕೃಷ್ಣಮೂರ್ತಿ ಅವರು ಅನುಭವಗಳನ್ನು ಹಂಚಿಕೊಂಡರು. ಈ ಸಂದರ್ಭ ಕಣಚೂರು ಶೈಕ್ಷಣಿಕ ಸಂಸ್ಥೆಯ ನಿರ್ದೇಶಕ ಯು.ಕೆ.ರಹಿಮಾನ್, ಡಾ.ಮಂಜುನಾಥ್ ರೈ, ರೋಹನ್ ಮೊನೀಸ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *