Header Ads
Header Ads
Breaking News

ಕಣಚೂರು ಸಂಸ್ಥೆ ಯುವ ವೈದ್ಯಕೀಯ ಸಂಸ್ಥೆಯಾಗಿದೆ : ರಹೀಂ ಖಾನ್ ಹೇಳಿಕೆ

ಕಣಚೂರು ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರಕ್ಕೆ ರಾಜ್ಯ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಂ ಖಾನ್ ಅವರು ಭೇಟಿ ನೀಡಿದರು. ಅವರನ್ನು ಆಸ್ಪತ್ರೆಯ ಅಧ್ಯಕ್ಷ ಯು. ಮೋನು ಅವರು ಆತ್ಮೀಯವಾಗಿ ಸ್ವಾಗತಿಸಿದರು.

ಕಣಚೂರು ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ರಹೀಂ ಖಾನ್ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಣಚೂರು ಸಂಸ್ಥೆ ಯುವ ವೈದ್ಯಕೀಯ ಸಂಸ್ಥೆಯಾಗಿದೆ. ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನಗಳ ಮೂಲಕ ಶಿಕ್ಷಣ ನೀಡುವುದರ ಮುಖೇನ ಪರಿಣಾಮಕಾರಿಯಾಗಿ ಬೆಳವಣಿಗೆಯಾಗಲಿದೆ ಎಂದರು.

ಆಸ್ಪತ್ರೆ ಆಡಳಿತಾಧಿಕಾರಿ ಡಾ| ರೋಹನ್ ಮೋನಿಸ್ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಯು.ಕಣಚೂರು ಮೋನು ಅವರು ಮಾತನಾಡಿ, ರಹೀಂ ಖಾನ್ ಮೇರು ವ್ಯಕ್ತಿತ್ವದ ವ್ಯಕ್ತಿಯಾಗಿದ್ದಾರೆ. ರಾಜ್ಯದ ಅಭಿವೃದ್ಧಿ ಕುರಿತು ಅವರಲ್ಲಿರುವ ಚಿಂತನೆಗಳು ರಾಜ್ಯವನ್ನು ಬಲಿಷ್ಠಗೊಳಿಸುವಂತೆ ಮಾಡಲಿದೆ ಎಂದರು.

ರಾಜೀವ ಗಾಂದಿ ವಿ.ವಿಗಳ ಸೆನೆಟ್ ಸದಸ್ಯ ಪ್ರೊ.ಇಫ್ತಿಕಾರ್ ಆಲಿ ಮಾತನಾಡಿ ರಾಜೀವ ಗಾಂಧಿ ವಿ.ವಿಯಡಿ ಬರುವ ಐದು ಕೋರ್ಸುಗಳನ್ನು ಸ್ಥಾಪಿಸಿದ ಏಕೈಕ ಕಾಲೇಜು ಕಣಚೂರು ಸಂಸ್ಥೆ ಆಗಿದೆ ಎಂದರು.ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ನ ವಿವಿಧ ಮುಖಂಡರುಗಳು ಜತೆಗಿದ್ದರು.

Related posts

Leave a Reply