Breaking News

ಕಣ್ಣೂರಿನಲ್ಲಿ ಆರೆಸ್ಸೆಸ್ ನೇತಾರನ ಕೊಲೆ,  ಹರತಾಳಕ್ಕೆ ಕರೆ ನೀಡಿದ ಬಿಜೆಪಿ

ಸದಾ ರಾಜಕೀಯ ಹಿಂಸಾಚಾರದಿಂದ ಕಂಗೆಟ್ಟಿರುವ ಕಣ್ಣೂರಿನಲ್ಲಿ ಶುಕ್ರವಾರ ಮತ್ತೆ ರಾಜಕೀಯ ತಾಂಡವವಾಡಿದ್ದು, ಕಣ್ಣೂರು ಪಯಂಗಡಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತ ಒಬ್ಬನನ್ನು ಶುಕ್ರವಾರ ಸಂಜೆ ಇರಿದು ಕೊಲೆಗೈಯಲಾಗಿದೆ.
ಕಕ್ಕಂಪಾರಡ ಆರೆಸ್ಸೆಸ್ ಮಂಡಲ ಕಾರ್ಯವಾಹ್ ೩೪ರ ಚೂರಕ್ಕಾಡು ಬಿಜು ಎಂಬವರು ಕೊಲೆಗೈಯಲ್ಪಟ್ಟ ವ್ಯಕ್ತಿಯಾಗಿದ್ದಾರೆ. ಈ ಕೊಲೆಯನ್ನು ಖಂಡಿಸಿ ಕಣ್ಣೂರು ಜಿಲ್ಲೆಯಲ್ಲಿ ಶನಿವಾರ ಬಿಜೆಪಿ ಹರತಾಳ ನದೆಸಿತು. ಶುಕ್ರವಾರ ಸಂಜೆ ಇನ್ನೋವಾ ಕಾರಿನಲ್ಲಿ ಬಂದ ತಂಡವೊಂದು ಬೈಕ್‌ನಲ್ಲಿ ಸಂಚರಿಸುತ್ತಿದ್ದ ಬಿಜು ಅವರಿಗೆ ಢಿಕ್ಕಿ ಹೊಡೆಸಿ ಬೀಳಿಸಿ ಇರಿದು ಪರಾರಿಯಾಯಿತು. ಇರಿತದಿಂದ ಗಂಭೀರ ಗಾಯಗೊಂಡು ತಕ್ಷಣ ಘಟನಾ ಸ್ಥಳದಲ್ಲಿ ಮೃತಪಟ್ಟರು. ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ.
ಪಯ್ಯನ್ನೂರು ಧನರಾಜ್ ಕೊಲೆ ಪ್ರಕರಣದ ೧೨ನೇ ಆರೋಪಿಯಾಗಿರುವ ಬಿಜು ಕೆಲವೇ ದಿನಗಳ ಹಿಂದೆಯಷ್ಟೇ ಜೈಲಿನಿಂದ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು. ಇದರ ಹಿಂದೆ ಸಿಪಿ‌ಎಂ ನೇತಾರರ ಕೈವಾಡವಿರುವುದಾಗಿ ಆರೋಪಿಸಿ ಕೊಲೆಯ ವಿರುದ್ಧ ಬಿಜೆಪಿ ಉಗ್ರ ಪ್ರತಿಭಟನೆ ನಡೆಸಿತು.

Related posts

Leave a Reply