
ಕಣ್ವತೀರ್ಥ ಮಠದ ಬ್ರಹ್ಮೇಶ್ವರ ದೇವರ ಸುತ್ತುಗೋಪುರ ಮತ್ತು ಮಹಾಕಲಶಾಭಿಷೇಕ ಪ್ರಯುಕ್ತ ಹಾಕಲಾಗಿದ್ದ ತೋರಣ ಹಾಗೂ ದೀಪವನ್ನು ಕಿಡಿಗೇಡಿಗಳಿಂದ ನಾಶ ಮಾಡಿದ ಘಟನೆ ನಡೆದಿದೆ.
ಈ ಬಗ್ಗೆ ಕ್ಷೇತ್ರ ಪದಾಧಿಕಾರಿಗಳು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಬುಧವಾರ ರಾತ್ರಿಯಿಂದಲೇ ಸುಮಾರು 11 ಗಂಟೆಯ ತನಕ ಕ್ಷೇತ್ರದ ಸ್ವಯಂ ಸೇವಕರು ಹಾಗೂ ಪೊಲೀಸರು ಸ್ಥಳದಲೇ ಇದ್ದರು. ಆದರೆ ಆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ತದ ಬಳಿಕವೇ ನಾಶ ಮಾಡಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.