Header Ads
Header Ads
Breaking News

ಕತಾರ್ ಕಬಡ್ಡಿ ಫೆಸ್ಟ್-2019:ಮಾರ್ಚ್ 22ರಂದು ಅಬು ಹಾಮರ್‌ನ ಅಲ್ ಜಜೀರ್ ಗ್ರೌಂಡ್‌ನಲ್ಲಿ ಪಂದ್ಯಾಟ

ಕತಾರ್ ಇಂಡಿಯನ್ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಕೇವಲ ಕತಾರ್ ಕಬಡ್ಡಿ ಆಟಗಾರರನ್ನು ಒಳಗೊಂಡ ಕತಾರ್ ಕಬಡ್ಡಿ ಫೆಸ್ಟ್-2019 ಅಬು ಹಾಮರ್‌ನ ಅಲ್ ಜಜೀರ್ ಗ್ರೌಂಡ್‌ನಲ್ಲಿ ಮಾರ್ಚ್ 22ರಂದು ನಡೆಯಲಿದೆ.ಕತಾರ್ ಇಂಡಿಯನ್ ಫ್ರೆಂಡ್ಸ್‌ನವರು ಕಬಡ್ಡಿ ಪಂದ್ಯಾಟವನ್ನು ಇದೇ ಮಾರ್ಚ್ 22ರಂದು ಹಮ್ಮಿಕೊಂಡಿದ್ದಾರೆ. ಈ ಪಂದ್ಯಾಟದಲ್ಲಿ ಪ್ರಥಮ ಬಹುಮಾನ ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ಹಾಗೂ ಟ್ರೋಫಿ, ತೃತೀಯ ಟ್ರೋಫಿ ಹಾಗೂ ಚತುರ್ಥ ಬಹುಮಾನ ಟ್ರೋಫಿ ಅಲ್ಲದೆ ಆಕರ್ಷಕ ವೈಯುಕ್ತಿಕ ಟ್ರೋಫಿಗಳನ್ನು ಬಹುಮಾನವಾಗಿ ನೀಡಲಿದ್ದಾರೆ. ಈ ಪಂದ್ಯಾಟದಲ್ಲಿ ಭಾಗವಹಿಸುವ ಸ್ಪರ್ಧಿಗಳು ರಜಾಕ್ ಪೆರುವಾಯಿ +9130881616 ಮತ್ತು ಸಲಾಮ್ ಪೆರುವಾಯಿ +97470787081 ರನ್ನು ಸಂಪರ್ಕಿಸಬಹುದು. ಅಲ್ಲದೆ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಜನತೆ ಈ ಪಂದ್ಯಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕತಾರ್ ಇಂಡಿಯಾ ಫ್ರೆಂಡ್ಸ್ ವಿನಂತಿಸಿದ್ದಾರೆ.

Related posts

Leave a Reply

Your email address will not be published. Required fields are marked *