Header Ads
Breaking News

ಕತಾರ್ ಬಿಲ್ಲವಾಸ್‍ನಿಂದ ರಕ್ತದಾನ ಅಭಿಯಾನ

ಕತಾರ್ ಬಿಲ್ಲವಾಸ್ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಇದು ಕತಾರ್ ಬಿಲ್ಲವಾಸ್ ಆಯೋಜಿಸಿದ್ದ ಎರಡನೇ ಶಿಬಿರವಾಗಿದ್ದು, 100ಕ್ಕೂ ಅಧಿಕ ಮಂದಿ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.ಕತಾರ್ ಬಿಲ್ಲವಾಸ್ ಸಾಮಾಜಿಕ ಕಳಕಳಿಯ ಸಂಘಟನೆಯಾಗಿದ್ದು, ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇದೀಗ 2ನೇ ಬಾರಿಗೆ ರಕ್ತದಾನ ಶಿಬಿರವನ್ನು ಆಯೋಜಿಸಿದ್ದಾರೆ. ಸುಮಾರು 100ಕ್ಕೂ ಅಧಿಕ ಮಂದಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು 48 ಯೂನಿಟ್‍ನಷ್ಟು ರಕ್ತ ಸಂಗ್ರಹಿಸಿದರು.

ಈ ಸಂದರ್ಭ ಐಸಿಸಿ ಅಧ್ಯಕ್ಷರಾದ ಮಣಿಕಾಂತನ್, ಐಸಿಬಿಎಫ್ ಅಧ್ಯಕ್ಷರಾದ ಬಾಬು ರಾಜನ್, ಐಬಿಪಿಸಿ ಪ್ರಧಾನ ಕಾರ್ಯದರ್ಶಿ ಹಬಿಬನ್ ನಬಿ, ಕರ್ನಾಟಕ ಸಂಘದ ಅಧ್ಯಕ್ಷರಾದ ವೆಂಕಟ್ ರಾವ್, ಉಪಾಧ್ಯಕ್ಷರಾದ ಮೂಡುಂಬೈಲ್ ರವಿಶೆಟ್ಟಿ, ತುಳುಕೂಟ ಮಾಜಿ ಅಧ್ಯಕ್ಷರಾದ ಅಸ್ಮತ್ ಆಲಿ, ಎಸ್‍ಕೆಎಮ್ ಡಬ್ಲ್ಯುಎಯ ಅಧ್ಯಕ್ಷರಾದ ಅಬ್ದುಲ್ ಮಜೀದ್, ಎಂಸಿಸಿ ಅಧ್ಯಕ್ಷರಾದ ಸುನೀಲ್ ಡಿಸಿಲ್ವಾ, ಎಮ್‍ಸಿಎ ಮಾಜಿ ಅಧ್ಯಕ್ಷರಾದ ಪ್ರಕಾಶ್ ನೊರಿಹ್ನಾ, ಐಸಿಬಿಎಫ್ ಉಪಾಧ್ಯಕ್ಷರಾದ ಮಹೇಶ್ ಗೌಡ, ಐಸಿಬಿಎಫ್ ಜೊತೆ ಕಾರ್ಯದರ್ಶಿ ಸುಬ್ರಹ್ಮಣ್ಯ ಹೆಬ್ಬಾಗಿಲು ಸೇರಿದಂತೆ ಆನೇಕ ಮಂದಿ ಸಮುದಾಯದ ಮುಖಂಡರು ಭಾಗವಹಿಸಿದ್ದರು .ಇದೇ ವೇಳೆ ಹಮದ್ ಆಸ್ಪತ್ರೆಯ ಡಾ. ಕಿಣಿ, ಕತಾರ್‍ನ ಬಿಲ್ಲವಾಸ್ ಅಧ್ಯಕ್ಷ ರಘುನಾಥ್ ಅಂಚನ್, ಸಂಸ್ಥಾಪಕರಾದ ದಿವಾಕರ್ ಪೂಜಾರಿಮ ಪ್ರಧಾನ ಕಾರ್ಯದರ್ಶಿ ಅಮಿತ್ ಪೂಜಾರಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *