Header Ads
Breaking News

ಕತ್ತಲಲ್ಲಿದ್ದ ಅಂದ ಬಡ ಕುಟುಂಬಕ್ಕೆ ಬಂತು ವಿದ್ಯುತ್ ಬೆಳಕು : ಗ್ರಾಮ ಪಂಚಾಯತ್ ಮುಖೇನ ವಿದ್ಯುತ್ ಸಂಪರ್ಕ ವ್ಯವಸ್ಥೆ

ಅದೊಂದು ಕಡು ಬಡತನದ ಕುಟುಂಬ, ಶೀಟ್ ಹಾಕಿರೋ ಮನೆ, ದುಡಿಯಲು ಶಕ್ತಿ ಇಲ್ಲದೆ ಸರಕಾರದಿಂದ ಬರೋ ಪಿಂಚಣಿಯಿಂದ ಜೀವನ ಸಾಗಿಸ್ತಾ ಇರೋ ವೃದ್ಧೆ, 4 ಮಂದಿ ಮಕ್ಕಳು ದೃಷ್ಟಿ ಇಲ್ಲದೆ ಜಗದ ಬೆಳಕನ್ನು ನೋಡದಂತಹ ಶೋಚಾನೀಯ ಸ್ಥಿತಿ…ವಿದ್ಯುತ್ ಸಂಪರ್ಕವಿಲ್ಲದ ಈ ಮನೆಗೆ ಗ್ರಾಮ ಪಂಚಾಯತ್ ಮುಖಾಂತರ ಇದೀಗ ಕರೆಂಟ್ ವ್ಯವಸ್ಥೆ ಮಮಾಡಿ ಕತ್ತಲಲ್ಲಿದ್ದ ಅಂದ ಕುಟಂಬಕ್ಕೆ ಬೆಳಕು ಬಂದಂತಾಗಿದೆ.

ಅಷ್ಟಕ್ಕೂ ಈ ದೃಶ್ಯ ಕಂಡು ಬಂದಿರೋದು ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ನಾರ್ಯ ಎಂಬಲ್ಲಿ… ಇಂತಹ ಕುಟುಂಬಕ್ಕೆ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲೇ ಜೀವ ಸಾಗಿಸೋ ಪರಿಸ್ಥಿತಿ ಇತ್ತು. ಆದ್ರೆ ಇದೀಗ ಮನೆಗೆ ಸ್ಥಳೀಯರ ಮನವಿ ಮೇರೆಗೆ ತಕ್ಷಣ ಸ್ಪಂದಿಸಿ ಕರೆಂಟ್ ವ್ಯವಸ್ಥೆಯನ್ನು ಧರ್ಮಸ್ಥಳ ಗ್ರಾಮ ಪಂಚಾಯತ್ ಮುಖಾಂತರ ಸದಸ್ಯ ಸುಧಾಕರ್ ಮಾಡಿದ್ದಾರೆ.

ಒಟ್ಟಿನಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಅಲ್ಲಿನ ಸ್ಥಳೀಯರು ಅಧಿಕಾರಿಗಳ ಕಣ್ಣು ತೆರೆಸಿ ಈ ಬಡ ಕುಟುಂಬಕ್ಕೆ ಬೆಳಕು ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

Related posts

Leave a Reply

Your email address will not be published. Required fields are marked *