Header Ads
Header Ads
Breaking News

ಕಥೊಲಿಕ್ ಸಭಾದ ಬೆಳ್ಳಿಹಬ್ಬ, ಕಥೊಲಿಕ್ ಸಮಾಜೋತ್ಸವ ಸಾಮಾಜಿಕ ಪರಿವರ್ತನೆಯ ಮೌಲ್ಯ ಎತ್ತಿಹಿಡಿಯಲು ಪಣತೊಡಿ ಕಥೋಲಿಕ್ ಸಭಾದ ನಿಲ್ ಲೋಬೊ ಫೆರ್ಮಾಯ್ ಅಭಿಪ್ರಾಯ

ಮೂಡುಬಿದಿರೆ : ಅತ್ಯುತ್ತಮ ಸಂವಿಧಾನವುಳ್ಳ, ಜಾತ್ಯಾತೀತ ಸ್ವತಂತ್ರ ಭಾರತದಲ್ಲಿ ಜೀವಿಸುವ ನಾವು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು, ಹೆಚ್ಚಿನ ನಾಯಕತ್ವವನ್ನು ತೋರ್ಪಡಿಸಿ ಸಾಮಾಜಿಕ ಪರಿವರ್ತನೆಯ ಮೌಲ್ಯಗಳನ್ನು ಎತ್ತಿಹಿಡಿಯಲು ಪಣತೊಡಬೇಕಿದೆ ಎಂದು ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ ಕೇಂದ್ರೀಯ ಸಮಿತಿ ಅಧ್ಯಕ್ಷ ನಿಲ್ ಲೋಬೊ ಫೆರ್ಮಾಯ್ ಹೇಳಿದರು.

ಅಲಂಗಾರು ಚರ್ಚ್ ಮೈದಾನದಲ್ಲಿ ಮೂಡುಬಿದಿರೆ ವಲಯ ಕಥೊಲಿಕ್ ಸಭಾದ ಬೆಳ್ಳಿಹಬ್ಬ ಸಮಾರೋಪ ಸಮಾರಂಭದ ಪ್ರಯುಕ್ತ ಆಯೋಜಿಸಲಾದ ಕಥೊಲಿಕ್ ಸಮಾಜೋತ್ಸವದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಭಿಷಪ್ ಅತೀ ವಂದನೀಯ ಅಲೋಶಿಯಸ್ ಪೌಲ್ ಡಿಸೋಜಾ ಸಮಾರಂಭದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಕಥೊಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕ ವಂ| ಗುರು ಮ್ಯಾಥ್ಯೂ ವಾಸ್, ಮೂಡುಬಿದಿರೆ ವಲಯದ ಪ್ರಧಾನ ಧರ್ಮಗುರು ವಂ| ಗುರು ಪಾವ್ಲ್ ಸಿಕ್ವೇರಾ, ಕರ್ನಾಟಕ ಸರಕಾರದ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಶಾಸಕ ಜೆ.ಆರ್. ಲೋಬೊ, ಕೆ. ಅಭಯಚಂದ್ರ ಜೈನ್, ಜಿಲ್ಲಾ ಪಂಚಾಯತ್ ಸದಸ್ಯ ಸುಚರಿತ ಶೆಟ್ಟಿ, ಉಡುಪಿ ಧರ್ಮಪ್ರಾಂತ್ಯದ ಕಥೋಲಿಕ್ ಸಭಾ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಬಿಹಾರದ ಬೆಥೀಯ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ನೇಮಕವಾದ ಅತೀ ವಂದನೀಯ ಸೆಬೆಸ್ಟಿಯನ್ ಪೀಟರ್ ಗೋವಿಯಸ್, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ, ಮಂಗಳೂರು ಕ್ರೈಮ್ ಬ್ರಾಂಚ್ ಎಸಿಪಿ ವೆಲೆಂಟೈನ್ ಡಿಸೋಜಾ, ಐ‌ಆರ್‌ಎಸ್ ಅಧಿಕಾರಿ ಕು| ಮಿಶಾಲ್ ಕ್ವೀನಿ ಡಿಕೋಸ್ತಾ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಭಿಷಪ್ ಅಲೋಶಿಯಸ್ ಪೌಲ್ ಡಿಸೋಜಾ, ಕಥೋಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಧರ್ಮಗುರುಗಳನ್ನು, ಕೇಂದ್ರ, ಪ್ರಾಂತ್ಯ ಹಾಗೂ ವಲಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು.

ಕ್ರೈಸ್ತ ಉದ್ಯಮಿಗಳ ವೇದಿಕೆಯ ಸಂಚಾಲಕರಾಗಿ ರಾಜೇಶ್ ಮೆಂಡಿಸ್ ತಾಕೊಡೆ ಅವರನ್ನು ಹಾಗೂ ಕ್ರೈಸ್ತ ಕೃಷಿಕರ ವೇದಿಕೆಯ ಸಂಚಾಲಕರಾಗಿ ಆಲ್ವಿನ್ ಮಿನೇಜಸ್ ಗಂಟಾಲ್ಕಟ್ಟೆ ಅವರನ್ನು ಘೋಷಿಸಲಾಯಿತು.

ಮೂಡುಬಿದಿರೆ ಶಾಸಕ ಅಭಯಚಂದ್ರ ಜೈನ್ ,ಮಂಗಳೂರು ಶಾಸಕ ಜೆ.ಆರ್. ಲೋಬೊ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ,ಬೆಳ್ಳಿಹಬ್ಬ ಸಂಚಾಲಕ ಜೆರಾಲ್ಡ್ ಡಿಕೋಸ್ತಾ, ನಿಕಟಪೂರ್ವ ಅಧ್ಯಕ್ಷ ಮೆಲ್ವಿನ್ ಡಿಕೋಸ್ತಾ, ಕಥೋಲಿಕ್ ಸಭಾ ವಲಯ, ಪ್ರಾಂತ್ಯ, ಕೇಂದ್ರೀಯ ಸಮಿತಿಯ ಹಾಲಿ ಮತ್ತು ಮಾಜಿ ಪದಾಧಿಕಾರಿಗಳು, ಘಟಕಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

Related posts

Leave a Reply