Header Ads
Header Ads
Header Ads
Breaking News

ಕದಮ್ ಕುಂದಾಪುರ ದೇವಾಡಿಗ ಮಿತ್ರರಿಂದ ಹೊಸ್ತಿನ ಸಂಭ್ರಮ ದಿನೇಶ್ ದೇವಾಡಿಗ ಮನೆಯಲ್ಲಿ ಕದಿರು ಕಟ್ಟುವ ಹಬ್ಬದ ಆಚರಣೆ

ಕದಮ್ ಕುಂದಾಪುರ ದೇವಾಡಿಗ ಮಿತ್ರ ಹೊಸ್ತಿನ ಸಂಭ್ರಮ ವಿಜೃಂಭಣೆಯಿಂದ ನಡೆಯಿತು.

ಪ್ರಾಚೀನ ಕಾಲದಿಂದಲೂ ಹಲವು ವಿಶಿಷ್ಟ ಸಂಪ್ರದಾಯ ಪರಂಪರೆ ಹಾಗೂ ಆಚರಣೆಗಳನ್ನು ಅಳವಡಿಸಿಕೊಂಡು ಬಂದು ಇವತ್ತಿನ ಆಧುನಿಕ ಯುಗದಲ್ಲಿ ಅದನ್ನು ಆಚರಣೆಯಲ್ಲಿ ಇಟ್ಟುಕೊಂಡು ಬಂದಿರುವುದು ಕುಂದಾಪುರದ ಜನತೆಯ ಹೆಮ್ಮೆಯ ವಿಷಯವಾಗಿದೆ.

ಅಲ್ಲದೇ ಅನೇಕ ವಿಶಿಷ್ಟ ಸಂಪ್ರದಾಯಗಳನ್ನು ಹುಟ್ಟು ಹಾಕಿದ ಕೀರ್ತಿ ಕುಂದಾಪುರದ ಜನತೆಗೆ ಸಲ್ಲುತ್ತದೆ … ಕದಮ್ ಕುಂದಾಪುರ ದೇವಾಡಿಗ ಮಿತ್ರ ಕದಮ್ ಮುಖ್ಯ ರೂವಾರಿ ಶ್ರೀ ದಿನೇಶ್ ದೇವಾಡಿಗರ ಮನೆಯಲ್ಲಿ ಎಲ್ಲಾ ದೇವಾಡಿಗ ಬಾಂಧವರು ಒಂದಾಗಿ ಬಂದು ಸಂಭ್ರಮ ಸಡಗರದಿಂದ ಕದಿರು ಕಟ್ಟುವ ಹಬ್ಬ ವನ್ನು ಆಚರಿಸಿದರು …

ಕದಮ್ ಕೆಲವು ಸದಸ್ಯರು ವಿವಿಧ ಬಗೆಯ ಸಿಹಿ ತಿನಿಸುಗಳನ್ನು ತಯಾರಿಸಿಕೊಂಡು ದಿನೇಶ್ ದೇವಾಡಿಗರ ಮನೆಗೆ ಆಗಮಿಸಿ ಅಲ್ಲಿಯೇ ಎಲ್ಲ ಮಿತ್ರರು ಒಂದು ಗೂಡಿ ಸಂಭ್ರಮ ಸಡಗರದಿಂದ ಔತಣ ಕೂಟವನ್ನು ಕದಮ್ ಮಿತ್ರರು ಸವಿದರು

ಪ್ರಶಾಂತ್ ನಾಯರ್ – ರಮೇಶ್ ಸುವರ್ಣ

Related posts

Leave a Reply