Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಕದ್ರಿ ಉದ್ಯಾನವದಲ್ಲಿ ದ್ರಾಕ್ಷಾರಸ ಮೇಳ ಆರಂಭ ದೇಶ ವಿದೇಶಗಳ ನೂರಾರು ಬಗೆಯ ವೈನ್‌ಗಳ ಪ್ರದರ್ಶನ ಮೊದಲ ದಿನವೇ ಭರ್ಜರಿ ವಹಿವಾಟು

ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಮೂರು ದಿನಗಳ ಕಾಲ ಅಂತರರಾಷ್ಟ್ರೀಯ ದ್ರಾಕ್ಷಾರಸ ಉತ್ಸವ ನಡೆಯುತ್ತಿದ್ದು, ದೇಶ ವಿದೇಶಗಳ ನೂರಕ್ಕೂ ಹೆಚ್ಚು ಬಗೆಯ ದ್ರಾಕ್ಷಾರಸಗಳು ಈ ಮೇಳದಲ್ಲಿ ಲಭ್ಯವಿದೆ.

ಭಾನುವಾರದವರೆಗೆ ದ್ರಾಕ್ಷಾರಸ ಮೇಳ ನಡೆಯಲಿದ್ದು, 17 ಮಳಿಗೆಗಳಲ್ಲಿ ದ್ರಾಕ್ಷಾರಸ ಮಾರಾಟ ಮತ್ತು ಪ್ರದರ್ಶನ ನಡೆಯುತ್ತಿದೆ. ಐದು ಮಳಿಗೆಗಳಲ್ಲಿ ಬಗೆ ಬಗೆಯ ಖಾದ್ಯಗಳೂ ಲಭ್ಯವಿದೆ. ದಕ್ಷಿಣ ಕನ್ನಡ ಜಿಲ್ಲೆಯ ದ್ರಾಕ್ಷಾರಸ ಪ್ರಿಯರು ತಂಡೋಪತಂಡವಾಗಿ ಮೇಳಕ್ಕೆ ಭೇಟಿ ನೀಡುತ್ತಿದ್ದಾರೆ. ಮೊದಲ ದಿನವೇ ದೊಡ್ಡ ಪ್ರಮಾಣದಲ್ಲಿ ದ್ರಾಕ್ಷಾರಸ ಮಾರಾಟ ನಡೆದಿದೆ.

ದ್ರಾಕ್ಷಾರಸ ಮೇಳಕ್ಕೆ ಶಾಸಕ ಜೆ.ಆರ್. ಲೋಬೊ ಭೇಟಿ ನೀಡಿ, ಮೇಳವನ್ನು ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ಮಂಗಳೂರು ದ್ರಾಕ್ಷಾರಸ ಮೇಳದ ಮುಖ್ಯ ಆಕರ್ಷಣೆಯಾಗಿದೆ ಎಂದರು

ದ್ರಾಕ್ಷಾರಸ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಚೋಪಿನ್ ಸಂಸ್ಥೆ ಮೊದಲ ಬಾರಿಗೆ ಮಂಗಳೂರು ದ್ರಾಕ್ಷಾರಸ ಮೇಳದಲ್ಲಿ ಪಾಲ್ಗೊಂದಿದೆ. 10 ದೇಶಗಳ ದ್ರಾಕ್ಷಾರಸಗಳು ಈ ಕಂಪೆನಿಯ ಮಳಿಗೆಯಲ್ಲಿವೆ. ಕರ್ನಾಟಕದ್ದೇ ಆಗಿರುವ ಬಿಗ್ ಬನ್ಯಾನ್ ೮ ಬಗೆಯ ದ್ರಾಕ್ಷಾರಸಗಳನ್ನು ಪ್ರದರ್ಶನಕಿಟ್ಟಿದ್ದಾರೆ.

ರೀಕೊ ಕಂಪೆನಿ ಏಳು ಬಗೆಯ ದ್ರಾಕ್ಷಾರಸಗಳನ್ನು ಪ್ರದರ್ಶಿಸಿದೆ. ಗ್ರೋವರ್ ಝಂಪಾ ಕಂಪೆನಿ 30 ಕ್ಕೂ ಹೆಚ್ಚು ಬಗೆಯ ದ್ರಾಕ್ಷಾರಸಗಳನ್ನು ಮೇಳದಲ್ಲಿ ಪರಿಚಯಿಸಿದೆ. ಮದ್ಯ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಧುಲೋಕ ಸಂಸ್ಥೆ ದೇಶ ವಿದೇಶಗಳ 40 ಕ್ಕೂ ಹೆಚ್ಚು ಬಗೆಯ ದ್ರಾಕ್ಷಾರಸಗಳೊಂದಿಗೆ ಮಳಿಗೆ ತೆರೆದಿದೆ. ಎಲೈಟ್, ವ್ಯಾಲಿಡೇ ಇಂಡೀಸ್ ಸೇರಿದಂತೆ ಹಲವು ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ಪರಿಚರಿಯಿಸಿದೆ.

Related posts

Leave a Reply