Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಕದ್ರಿ ಉದ್ಯಾನವನದಲ್ಲಿ ಸಂಗೀತ ಕಾರಂಜಿ ಲೋಕಾರ್ಪಣೆ ಉದ್ಯಾನವನದಲ್ಲಿ ಹೊಸ ಪುಟಾಣಿ ರೈಲಿಗೆ ಚಾಲನೆ ಸಂಗೀತ ಕಾರಂಜಿ, ಲೇಸರ್ ಶೋ ಗೆ ಮೆಚ್ಚುಗೆ ವೆಕ್ತಪಡಿಸಿದ ಸಿ‌ಎಂ

ಮಂಗಳೂರಿನ ಕದ್ರಿ ಉದ್ಯಾನವನದ ಮುಗ್ಗಲಿನಲ್ಲಿರುವ ಹಳೆಯ ಜಿಂಕೆ ಪಾರ್ಕ್ ನಲ್ಲಿ ಅಭಿವೃದ್ಧಿ ಪಡಿಸಲಾದ ಸಂಗೀತ ಕಾರಂಜಿ , ಲೇಸರ್ ಶೋ ಹಾಗೂ ಉದ್ಯಾನವನದಲ್ಲಿ ಹೊಸ ಪುಟಾಣಿ ರೈಲನ್ನು ಸಿ‌ಎಂ ಸಿದ್ಧರಾಮಯ್ಯ ಉದ್ಘಾಟಿಸಿದರು. ಬಳಿಕ ಸಂಗೀತ ಕಾರಂಜಿ ಮತ್ತು ಲೇಸರ್ ಶೋ ಪ್ರದರ್ಶನವನ್ನು ಕಣ್ತುಂಬಿಕೊಂಡ ಮುಖ್ಯ ಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಕರಾವಳಿಯ ಸಂಸ್ಕೃತಿ ಬಿಂಬಿಸುವ ಚಿತ್ರಗಳು, ಸಂಗೀತವನ್ನು ಈ ವೇಳೆ ಪ್ರದರ್ಶಿಸಲಾಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ, ಸಚಿವ ಯು.ಟಿ

 

ಖಾದರ್, ಶಾಸಕರಾದ ಜೆ.ಆರ್.ಲೋಬೋ, ಮೊಯಿದ್ದೀನ್,ಮೂಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಮೇಯರ್ ಕವಿತಾ ಸನಿಲ್ ಮತ್ತಿತರು ಉಪಸ್ಥಿತರಿದ್ದರು. ಹಳೆಯ ಜಿಂಕೆ ಪಾರ್ಕ್ ನಲ್ಲಿರುವ 4.01 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ರಾಜ್ಯ ಹಣಕಾಸು ಆಯೋಗ 4.97 ಕೋಟಿ.ರೂಪಾಯಿ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ೨ಕೋಟಿ ರೂಪಾಯಿ ವೆಚ್ಚದಲ್ಲಿ ಸಂಗೀತ ಕಾರಂಜಿ, ಲೇಸರ್ ಶೋ, ಮತ್ತು ಪುಟಾಣಿ ರೈಲಿನ ವ್ಯವಸ್ಥೆ ರೂಪಿಸಲಾಗಿದೆ.

Related posts

Leave a Reply