Header Ads
Header Ads
Breaking News

ಕದ್ರಿ ಕಾಲಭೈರವ ದೇವಸ್ಥಾನದಲ್ಲಿ ಕಾಲಭೈರವ ಅಷ್ಟಮಿ ಪೂಜೆ

ಮಂಗಳೂರಿನ ಕದ್ರಿ ಕಾಲಭೈರವ ದೇವಸ್ಥಾನದಲ್ಲಿ ಕಾಲಭೈರವ ಅಷ್ಟಮಿ ಪೂಜೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಈ ವೇಳೆ ಹಲವಾರು ಮಂದಿ ದೇವರ ದರ್ಶನ ಪಡೆದುಕೊಂಡರು.ನಗರದ ಹೆಸರಾಂತ ಕ್ಷೇತ್ರಗಳಲ್ಲಿ ಒಂದಾದ ಕದ್ರಿಯ ಕಾಲಭೈರವ ದೇವಸ್ಥಾನದಲ್ಲಿ ಕಾಲ ಭೈರವ ಅಷ್ಟಮಿ ಪೂಜೆಯನ್ನ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಸಲಾಯ್ತು, ವರುರ್ಷಕ್ಕೆ ಒಂದು ಬಾರಿ ಬರುವ ಕಾಲ ಭೈರವ ಅಷ್ಟಮಿ ಪೂಜೆಯಲ್ಲಿ, ಹಲವಾರು ಮಂದಿಗೆ ಶ್ರೀಕ್ಷೇತ್ರಕ್ಕೆ ಆಗಮಿಸಿ, ದೇವರ ದರ್ಶನವನ್ನು ಪಡೆದರು. ಶಾಸಕರಾದ ಡಿ.ವೇದವ್ಯಾಸ ಕಾಮತ್ ಕೂಡ ಕ್ಷೇತ್ರಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದುಕೊಂಡರು, ಈ ವೇಳೆ ಯೋಗಿ ನಿರ್ಮಲ್‌ನಾಥ್ ಮಹಾರಾಜ್ ಮಾತನಾಡಿ, ವರುರ್ಷಕ್ಕೆ ಒಮ್ಮೆ ಬಾರಿ ಕಾಲಭೈರವ ಅಷ್ಟಮಿ ಪೂಜೆ ಬರುತ್ತೆ, ಭಕ್ತರು ಕೂಡಾ ಕ್ಷೇತ್ರಕ್ಕೆ ಬಂದು ದೇವರ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಇದೇ ಮುಂದಿನ ವರುರ್ಷ ಶ್ರೀ ಕ್ಷೇತ್ರವು ಜೀರ್ಣೋದ್ಧಾರ ಕಾರ್ಯ ನಡೆಯಲಿದ್ದು, ಹೀಗಾಗಿ ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ರು.

Related posts

Leave a Reply