Header Ads
Header Ads
Breaking News

ಕದ್ರಿ ಠಾಣೆಯಲ್ಲಿ ಸಾನಿಧ್ಯದ ಮಕ್ಕಳಿಂದ ರಕ್ಷಾಬಂಧನ. ಸಾನಿಧ್ಯ ಮಕ್ಕಳೇ ತಯಾರಿಸಿದ ರಕ್ಷೆಯನ್ನು ಕಟ್ಟಿಕೊಂಡ ಆರಕ್ಷಕರು.

ಮಂಗಳೂರಿನ ಶಕ್ತಿನಗರದಲ್ಲಿರುವ ಭಿನ್ನ ಸಾಮರ್ಥ್ಯದ ವಸತಿಯುತ ಶಾಲೆ ಮತ್ತು ಸಂಸ್ಥೆಯ ಮಕ್ಕಳು ಕದ್ರಿಯ ಪೊಲೀಸ್ ಠಾಣೆಯ ಆರಕ್ಷಕರೊಂದಿಗೆ ರಕ್ಷಾಬಂಧನ ಕಾರ್ಯಕ್ರವನ್ನು ಆಚರಿಸಿದರು.ಸಾನಿಧ್ಯದ ಮಕ್ಕಳು ಪ್ರತೀ ವರುಷವೂ ವಿಭಿನ್ನವಾಗಿ ರಕ್ಷಾಬಂಧನ ಕಾರ್ಯಕ್ರಮವನ್ನು ಅಚರಿಸಿಕೊಂಡುಬರುತ್ತಿದ್ದರು. ಈ ಬಾರಿ ಕದ್ರಿಯ ಪೊಲೀಸ್ ಠಾಣೆಯ ಆರಕ್ಷಕರೊಂದಿಗೆ ರಕ್ಷಾಬಂಧನ ದಿನವನ್ನು ಆಚರಿಸಿದರು. ಸಾನಿಧ್ಯದ ಮಕ್ಕಳು ಸ್ವತ ತಾವೇ ರಕ್ಷಾ ಬಂಧನ ತಯಾರಿಸಿದ್ದು ವಿಶೇಷವಾಗಿತ್ತು.

ಇದೇ ವೇಳೆ ಮಾತನಾಡಿದ ಪೊಲೀಸ್ ಅಧಿಕಾರಿ ಪ್ರದೀಪ್ ಅವರು, ಸಾನಿಧ್ಯದ ಮಕ್ಕಳು ನಮ್ಮೊಂದಿಗೆ ರಕ್ಷಾ ಬಂಧನವನ್ನು ಆಚರಿಸಿ ಶುಭಾಶಯವನ್ನು ಕೋರಿರುವುದು ಸಂತಸದ ವಿಚಾರ ಎಂದರು.ಇದೇ ವೇಳೆ ಕದ್ರಿಯ ಪೊಲೀಸರು ಮಕ್ಕಳಿಗೆ ಸಿಹಿ ತಿಂಡಿ ಹಂಚಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.ಈ ಸಂದರ್ಭ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆಯ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply