Header Ads
Breaking News

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮೇ.2 ರಿಂದ 11ರ ವರೆಗೆ ಬ್ರಹ್ಮಕಲಶೋತ್ಸವದ ಸಂಭ್ರಮ

ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಶ್ರೀ ಮಂಜುನಾಥ ಹಾಗೂ ಪರಿವಾರ ದೇವರಿಗೆ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಮತ್ತು ಮಹಾದಂಡರುದ್ರಾಭಿಷೇಕ ಹಾಗೂ ಮಹಾರುದ್ರಯಾಗ ಇಂದಿನಿಂದ ವಿಜ್ರಂಭಣೆಯಿಂದ ನಡೆಯಲಿದ್ದು. ದೇವಾಲಯ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದೆ.  

ಇತಿಹಾಸ ಪ್ರಸಿದ್ಧ, ಸಾವಿರ ಸೀಮೆಯ ಒಡೆಯ ಮಂಗಳೂರು ಸೀಮೆಯ ಪ್ರಧಾನ ದೇವರಾದ ಕದ್ರಿ ಶ್ರೀ ಮಂಜುನಾಥ ದೇವರಿಗೆ ಹಾಗೂ ಪರಿವಾರ ದೇವರುಗಳಿಗೆ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಮತ್ತು ಮಹಾದಂಡರುದ್ರಾಭಿಷೇಕ ಹಾಗೂ ಮಹಾರುದ್ರಯಾಗ ಇಂದಿನಿಂದ ಶ್ರದ್ಧ ಭಕ್ತಿಯಿಂದ ಆರಂಭಗೊಂಡು 10ನೇ ತಾರೀಕಿನ ವರೆಗೆ ಶ್ರೀ ರಾಜಾನಿರ್ಮಲನಾಥ್ ಜೀ ಅವರ ಉಪಸ್ಥಿತಿಯಲ್ಲಿ ದೇರೆಬೈಲ್ ಬ್ರಹ್ಮಶ್ರೀ ವಿಟ್ಠಲದಾಸ್ ತಂತ್ರಿವರೇಣ್ಯರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿದಾನದೊಂದಿಗೆ ವಿಜ್ರಂಭಣೆಯಿಂದ ನೆರೆವೇರಲಿದೆ.ಇಂದು ಮುಂಜಾನೆಯಿಂದ ಶ್ರೀ ದೇವರಿಗೆ ಸಾಮೂಹಿಕ ಪ್ರಾಥನೆ,ತೋರಣ ಮೂಹೂರ್ತ,ಉಗ್ರಾಣ ಮುಹೂರ್ತ,ಪುಣ್ಯಾಹ, ಮಧುಪರ್ಕ, ಅಗ್ನಿಜನನ, ಅಧ್ವಗಣಯಾಗ ಶ್ರಧ್ಧಾ ಭಕ್ತಿಯಿಂದ ನಡೆಯಿತು.ಈ ಸಂದರ್ಭ ಶ್ರೀ ಕ್ಷೇತ್ರದ ಅರ್ಚಕರಾದ ಕೃಷ್ಣ ಅಡಿಗರವರು ಮಾತನಾಡಿ ಇತಿಹಾಸ ಪ್ರಸಿದ್ಧ ಕದ್ರೀ ಶೀ ಮಂಜುನಾಥ ಕ್ಷೇತ್ರದಲ್ಲಿ ವಿಶೆಷವಾಗಿ ಹತ್ತು ದಿನದ ಭ್ರಹ್ಮಕಲಶೋತ್ಸವ ಈ ಸಂದರ್ಭ ಅನೇಕನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. 9ನೇ ತಾರೀಕಿನಂದು ಭ್ರಹ್ಮಕಲಶಾಭಿಷೇಕ, ನೂತನವಾಗಿ ಶಿಲಾಮಯಗೊಂಡ ದುರ್ಗಾ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ನಡೆಯಲಿದೆ. ವಿಶೇಷವೆಂದರೆ ಮಹಾದಂಡರುದ್ರಾಭಿಷೇಕ ನಡೆಯಲಿದೆ ಎಂದು ಕ್ಷೇತ್ರದ ಇತಿಹಾಸವನ್ನು ಬಣ್ಣಿಸಿದರು.

ಬಳಿಕ ಸಂಘಟಕ ಡಿ.ಕೆ.ಅಶೋಕ್ ಮಾತನಾಡಿ ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು ಸಂಜೆ ಹಸಿರು ಹೊರೆಕಾಣಿಕೆ ಹಾಗೂ ಮಲರಾಯ ದೈವದ ಭಂಡಾರ ಗಾಣದ ಕೊಟ್ಯ ಕದ್ರಿ ಕಂಬಳ ದೈವಸ್ಥಾನದಿಂದ ದೇವಸ್ಥಾನಕ್ಕೆ ಹೊರಡಲಿದೆ ಎಂದು ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಸಾವಿರ ಸೀಮೆಯ ಒಡೆಯನಾದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಶ್ರೀ ಮಂಜುನಾಥ ಹಾಗೂ ಪರಿವಾರ ದೇವರಿಗೆ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಮತ್ತು ಮಹಾದಂಡರುದ್ರಾಭಿಷೇಕ ಹಾಗೂ ಮಹಾರುದ್ರಯಾಗ ವಿಜ್ರಂಭಣೆಯಿಂದ ನಡೆಯುತ್ತಿದ್ದು ಈ ಪುಣ್ಯಕರ್ಯದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರವಾಗಲು ಭಕ್ತ ಸಾಗರ ಹರಿದುಬರುತ್ತಿದೆ.

Related posts

Leave a Reply

Your email address will not be published. Required fields are marked *