Header Ads
Header Ads
Breaking News

ಕದ್ರಿ ಶ್ರೀ ಮಂಜುನಾಥ ದೇವಾಲಯದ ಜಾತ್ರಾ ಮಹೋತ್ಸವ

ಕದ್ರಿ ಶ್ರೀ ಮಂಜುನಾಥ ದೇವಾಲಯದ ಜಾತ್ರೆಯ ಸಂದರ್ಭದಲ್ಲಿ 12 ದಿನಗಳ ಕಾಲ ಮಲ್ಲಿಕಾ ಕಲಾ ವೃಂದ ಕದ್ರಿ ಇದರ ವತಿಯಿಂದ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವ ನಡೆಯಲಿದೆ ಎಂದು ಮಲ್ಲಿಕಾ ಕಲಾ ವೃಂದ ಕದ್ರಿ ಇದರ ಕಾರ್ಯಾಧ್ಯಕ್ಷ ಸುಧಾಕರ ರಾವ್ ಪೇಜಾವರ ಹೇಳೀದರು.
ಇವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ ದಿನಾಂಕ 14ರಿಂದ 25ರ ವರೆಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಮಹೋತ್ಸವ ನಡೆಯಲಿದೆ ಈ ಸಂದರ್ಭ ದೇವಾಲಯದ ರಾಜಾಂಗಣದಲ್ಲಿ ಮಲ್ಲಿಕಾ ಕಲಾ ವೃಂದದ 69ನೇ ವರ್ಷದ ಧಾರ್ಮಿಕ ಮತ್ತು ಸಾಂಸಕೃತಿಕ ಉತ್ಸವ ನೆರವೇರಲಿದೆ ಎಂದು ಹೇಳಿದರು.
ಈ ಸಂದರ್ಭ ಮಲ್ಲಿಕಾ ಕಲಾ ವೃಂದ ಕದ್ರಿ ಇದರ ಕೊಶಾಧಿಕಾರಿಗಳಾದ ರತ್ನಾಕರ್ ಜೈನ್,ಎಸ್ ಎಲ್ ಶೇಟ್‌ನ ಮ್ಯಾನೆಜಿಂಗ್ ಡೈರೆಕ್ಟರ್ ರವೀಂದ್ರ ಶೇಟ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಹರೀಶ್ ಕುಮಾರ್, ಮಹಿಳಾ ಸಂಚಾಲಕಿ ಶೋಭಾ ಎಸ್ ಪೇಜಾವರ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply