Header Ads
Header Ads
Header Ads
Breaking News

‘ಕದ್ರಿ ಸಂಗೀತ ಸೌರಭ್’ ಸಂಗೀತ ಹಬ್ಬದ ಉದ್ಘಾಟನೆ

ಕದ್ರೀಸ್ ಕೀಸ್ ಸ್ಟುಡಿಯೋಸ್ ಮತ್ತು ದ. ಕ. ಜಿಲ್ಲಾಡಳಿತ ವತಿಯಿಂದ ಪದ್ಮಶ್ರೀ ಡಾ| ಕದ್ರಿ ಗೋಪಾಲನಾಥ್ ಹುಟ್ಟುಹಬ್ಬದ ಅಂಗವಾಗಿ ಕುದ್ಮುಲ್ ರಂಗರಾವ್ ಪುರಭವನದಲ್ಲಿ “ಕದ್ರಿ ಸಂಗೀತ ಸೌರಭ’ ಸಂಗೀತ ಹಬ್ಬದ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಕಾರ್ಯಕ್ರಮವನ್ನು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪಾಶ್ಚಾತ್ಯ ಪ್ರಭಾವದಿಂದಾಗಿ ಭಾರತೀಯ ಸಂಗೀತವು ಸ್ವಲ್ಪ ಮಂಕಾಗಿ ಕಂಡರೂ ಮತ್ತೆ ಚಿಗುರುತ್ತದೆ.
ಮೇಲ್ನೋಟಕ್ಕೆ ಭಾರತೀಯ ಸಂಗೀತ ಅಪಾಯದಲ್ಲಿದೆ ಎಂದು ಕಂಡುಬರುತ್ತದೆ. ಆದರೆ ಎಂದಿಗೂ ಹಾಗಿಲ್ಲ. ಕದ್ರಿಯವರು ತನ್ನ ಆದರ್ಶಗಳನ್ನು ಮುಂದಿನ ತಲೆಮಾರಿಗೆ ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದರು.

ಡಾ| ಮೋಹನ ಆಳ್ವ ಮಾತನಾಡಿ, , ಸ್ಯಾಕ್ಞ್ಪೊಫೋನ್  ವಾದನವನ್ನು ಭಾರತೀಯ ಪರಂಪರೆಗೆ ಸೇರಿಸಿದ್ದು ಡಾ| ಕದ್ರಿಯವರ ಹೆಗ್ಗಳಿಕೆ. ಅವರು ಸಂಗೀತ ಚಕ್ರವರ್ತಿ ಎಂದರು.

ಇದೇ ವೇಳೆ ಗಣ್ಯರು ಪದ್ಮಶ್ರೀ ಡಾ. ಕದ್ರಿ ಗೋಪಾಲನಾಥ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ಕದ್ರಿ ಅವರ ಗುರು ಪದ್ಮಶ್ರೀ ಡಾ| ಟಿ.ವಿ. ಗೋಪಾಲಕೃಷ್ಣನ್, ಲಂಡನ್‍ನ ಟ್ರಿನಿಟಿಕಾಲೇಜು ಆಫ್ ಮ್ಯೂಸಿಕ್‍ನ ಕ್ಯಾಂಡಿಡಾ ಕಾನೊಲಿ, ಮಂಗಳೂರು ಸ್ಮಾರ್ಟ್‍ಸಿಟಿ ಲಿ. ಕಂಪೆನಿಯ ಆಡಳಿತ ನಿರ್ದೇಶಕ ಮೊಹಮ್ಮದ್ ನಜೀರ್, ಸಿದ್ಧ ಗುರುಪೀಠದ ಗೋಮತಿ ದಾಸ್, ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್, ಅಂಬಿಕಾ ಮೋಹನ್, ನಿತ್ಯಾನಂದ ರಾವ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *