Header Ads
Breaking News

ಕನಕದಾಸರ ಕೀರ್ತನ ಗಾಯನ ಸ್ಪರ್ಧೆ “ಕನಕ ಕೀರ್ತನ” ಕಾರ್ಯಕ್ರಮ ;  ಶ್ರೀ ರಾಮಕೃಷ್ಣ ಕಾಲೇಜಿನ ಸಭಾಂಗಣದಲ್ಲಿ ಆಯೋಜನೆ

ಮಂಗಳೂರು ವಿಶ್ವವಿದ್ಯಾನಿಲಯ, ಕನಕದಾಸ ಸಂಶೋಧನಾ ಕೇಂದ್ರ ಮತ್ತು ಶ್ರೀ ರಾಮಕೃಷ್ಣ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಕನಕದಾಸರ ಕೀರ್ತನ ಗಾಯನ ಸ್ಪರ್ಧೆ “ಕನಕ ಕೀರ್ತನ” ಕಾರ್ಯಕ್ರಮ ನಗರದ ಶ್ರೀ ರಾಮಕೃಷ್ಣ ಕಾಲೇಜಿನ ಶ್ರೀಮತಿ ಗೀತಾ ಎಸ್.ಎಂ.ಶೆಟ್ಟಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ಸಾಹಿತಿ, ಕವಿ, ಬಿ.ಆರ್.ಲಕ್ಷ್ಮಣ್ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ಮಾತನಾಡಿ ಪ್ರಸ್ತುತ ಸಮಾಜದಕ್ಕೆ ಮತ್ತು ಯುವ ಪೀಳಿಗೆಗೆ ಕನಕ ದಾಸರ ಮತ್ತು ಪುರಂದರ ದಾಸರ ಕೀರ್ತನೆಗಳ ಕುರಿತು ತಿಳಿಸುವ ಅಗತ್ಯವಿದೆ. ಒಂದು ಅರ್ಥದಲ್ಲಿ ದಾಸ ಪರಂಪರೆಯ ಕೀರ್ತನೆಗಳ ದೈವಿಕ ಮತ್ತು ಸಾಮಾಜಿಕ ಚಿಂತನೆಗಳು ವಿದ್ಯಾರ್ಥಿ ಜೀವನದಲ್ಲಿ ಅರಿತುಕೊಳ್ಳಬೇಕು ಎಂದು ಹೇಳಿದರು.

ಬಳಿಕ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೋಫೆಸರ್ ಎ.ಎಂ ಖಾನ್ ಮಾತನಾಡಿ ಕನಕದಾಸರು, ಪುರಂದರದಾಸರ ಇವರೆಲ್ಲಾ ದಾಸ ಸಾಹಿತಿಗಳು ಇವರ ಕೀರ್ತನೆಗಳನ್ನು ಈಗಿನ ಯುವ ಪೀಳಿಗೆ ಯಾವಾಗ ಸರಿಯಾಗಿ ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಬಳಿಕ ವಿವಿಧ ವಿಭಾಗಗಳಲ್ಲಿ ಕನಕದಾಸರ ಕೀರ್ತನೆ ಗಾಯನ ಸ್ಪರ್ಧೆ ನಡೆಯಿತು. ನೂರಾರು ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು.

ಈ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮೆಂಬರ್ ಕೆ.ರಮೇಶ್, ಬಂಟರ ಯಾನೆ ನಾಡವರ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ, ಕನಕ ಸಂಶೋಧನಾ ಕೇಂದ್ರದ ಸಂಚಾಲಕ ಡಾ.ದನಂಜಯ್ ಕುಂಬ್ಳೆ, ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲರಾದ ಬಾಲಕೃಷ್ಣ ಶೆಟ್ಟಿ ಕಟೀಲ್, ಕಾರ್ಯಕ್ರಮ ಸಂಯೋಜಕ ನಟೇಶ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

ಕನಕದಾಸರ ಕೀರ್ತನ ಗಾಯನ ಸ್ಪರ್ಧೆ “ಕನಕ ಕೀರ್ತನ” ಕಾರ್ಯಕ್ರಮ ; ನಗರದ ಶ್ರೀ ರಾಮಕೃಷ್ಣ ಕಾಲೇಜಿನ ಸಭಾಂಗಣದಲ್ಲಿ ಆಯೋಜನೆ

Related posts

Leave a Reply

Your email address will not be published. Required fields are marked *