Header Ads
Header Ads
Header Ads
Breaking News

ಕನಕದಾಸರ ಭಕ್ತಿಗೆ ಕೃಷ್ಣ ಪಶ್ಚಿಮಕ್ಕೆ ತಿರುಗಿದ್ದು ಹೌದು ಕೆಲ ಸನಾತನಿಗಳೂ ಈ ಪವಾಡವನ್ನು ಒಪ್ಪುವುದಿಲ್ಲ ಉಡುಪಿಯಲ್ಲಿ ಪೇಜಾವರ ಶ್ರೀ ಹೇಳಿಕೆ

ಕನಕದಾಸರ ಭಕ್ತಿಗೆ ಕೃಷ್ಣ ಪಶ್ಚಿಮಕ್ಕೆ ತಿರುಗಿದ್ದು ಹೌದು .ಈ ಬಗ್ಗೆ ಹಲವರಿಗೆ ಜಿಜ್ಞಾಸೆಯಿದೆ. ಕೆಲವು ಬುದ್ಧಿಜೀವಿಗಳು ಟೀಕಿಸುತ್ತಾರೆ .ಕೆಲ ಸನಾತನಿಗಳೂ ಈ ಪವಾಡವನ್ನು ಒಪ್ಪುವುದಿಲ್ಲ ,ಕೃಷ್ಣ ಕನಕದಾಸರಿಗೆ ಒಲಿದು ದಿಕ್ಕು ಬದಲಿಸಿದ್ದಲ್ಲ ಎಂದು ವಾದಿಸುತ್ತಾರೆ .ಪ್ರಾಚೀನವಾದ್ದೆನ್ನಲ್ಲ ಬುದ್ಧಿಜೀವಿಗಳು ಅಲ್ಲಗಳೆಯುತ್ತಿದ್ದಾರೆ. ಸನಾತನಿಗಳು ಪುರಂದರದಾಸರ, ಮಧ್ವಾಚಾರ್ಯರದ್ದು ಪವಾಡ ಒಪ್ಪುತ್ತಾರೆ ಕನಕದಾಸರ ಪವಾಡ ಯಾಕೆ ನೀವು ಒಪ್ಪುವುದಿಲ್ಲ ಎಂದು ಉಡುಪಿಯಲ್ಲಿ ಪೇಜಾವರ ಶ್ರೀಗಳು ಪ್ರಶ್ನೆ ಮಾಡಿದ್ದಾರೆ. ಕನಕದಾಸ ಜಯಂತಿ ಪ್ರಯುಕ್ತ ರಾಜಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ವಾದಿರಾಜ ಸ್ವಾಮಿಗಳು ರಚಿಸಿದ ಹಾಡು ಲಭ್ಯವಾಗಿದೆ. ವಾದಿರಾಜರು ತಮ್ಮ ಹಾಡಿನಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ವಾದಿರಾಜರು ನಾನ್ನೂರು ವರ್ಷಗಳ ಹಿಂದಿದ್ದ ಅಷ್ಟಮಠಗಳ ಪ್ರಮುಖ ಯತಿ ಇನ್ನಾದರೂ ಚರ್ಚೆಗೆ ತೆರೆ ಎಳೆಯಬೇಕು ಎಂದು ಪೇಜಾವರ ಶ್ರೀ ಅಭಿಪ್ರಾಯಪಟ್ಟರು

Related posts

Leave a Reply