Header Ads
Header Ads
Breaking News

“ಕನಸಿನ ಮೂಡುಬಿದಿರೆಯ ಮೂಲಕ ಬದಲಾವಣೆ ಮಾಡುತ್ತೇನೆ”.ಮೂಲ್ಕಿ-ಮೂಡುಬಿದರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿಕೆ.

ಮೂಡುಬಿದಿರೆ : ಸಮರ್ಪಕ ಒಳಚರಂಡಿ, ವಿವಿಧ ಇಲಾಖೆಗಳು ಒಂದೇ ಸೂರಿನಲ್ಲಿರುವಂತೆ “ಮಿನಿ ವಿಧಾನಸೌಧ”, ಸರಕಾರಿ ಕಾಲೇಜು, ಸರಕಾರಿ ಬಸ್ಸು ತರಲು ಪ್ರಯತ್ನ, ಮೂಡಾ ಸಮಸ್ಯೆಗೆ ಪರಿಹಾರ, ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ, ರಾಜಕೀಯ ಹಸ್ತಕ್ಷೇಪವಿಲ್ಲದೆ ಹಾಗೂ ಸ್ವಚ್ಛ ಪರಿಸರದೊಂದಿಗೆ ನನ್ನ ಕನಸ್ಸಿನ ಮೂಡುಬಿದಿರೆಯನ್ನು ನಿರ್ಮಾಣ ಮಾಡುವ ಮೂಲಕ ಹೊಸ ಬದಲಾವಣೆಯನ್ನು ತರುತ್ತೇನೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಭರವಸೆಯನ್ನು ನೀಡಿದ್ದಾರೆ.ಅವರು ರೋಟರಿ ಕ್ಲಬ್ ಮೂಡುಬಿದಿರೆ ವತಿಯಿಂದ ಸಮ್ಮಿಲನ್ ಹಾಲ್‌ನಲ್ಲಿ ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ ಮೂಡುಬಿದಿರೆಯಲ್ಲಿ ಯಾವ ರೀತಿಯಾಗಿ ಬದಲಾವಣೆ ತರುತ್ತೇನೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದರು.ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ನೆನೆಗುದಿಗೆ ಬಿದ್ದಿರುವ ಬಗ್ಗೆ ಪ್ರಶ್ನಿಸಿದಾಗ, ಹೈವೇಗೆ ಡಿಪಿಆರ್ ಸಿದ್ಧಗೊಂಡಿದ್ದು ನೋಟಿಫಿಕೇಶನ್ ಆಗಿಲ್ಲ. ಈ ಹಿಂದೆ ರಾಜ್ಯ ಸರಕಾರವು ಅಸಹಕಾರ ತೋರಿಸಿದ್ದರಿಂದ ಕೆಲಸ ಮುಂದುವರೆದಿಲ್ಲ. ಜಾಗ ಸರ್ವೆ ಆಗಿ ನೀಲಿ ನಕ್ಷೆ ರೆಡಿಯಾಗಿದೆ ಈ ಬಗ್ಗೆ ಎಲ್ಲಾ ಅಧಿಕಾರಿಗಳನ್ನು ಶನಿವಾರ ಸಭೆ ಕರೆದಿದ್ದು ಮುಂದಿನ 5-6 ತಿಂಗಳಲ್ಲಿ ಇದಕ್ಕೆ ಉತ್ತರ ಸಿಗಬಹುದು ಎಂದು ತಿಳಿಸಿದರು. ತಾಂತ್ರಿಕ ಶಿಕ್ಷಣವನ್ನು ಪೂರೈಸಿರುವವರಿಗೆ ಐಟಿಐ ಕಾಲೇಜಿನ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ಈಗಾಗಲೇ ಬನ್ನಡ್ಕದಲ್ಲಿ ಪಾಳು ಬಿದ್ದಿರುವ ಕೈಗಾರಿಕ ಶಿಕ್ಷಣ ಸಂಸ್ಥೆಯನ್ನು ಎಂಆರ್‌ಪಿಎಲ್‌ಗೆ ಹಸ್ತಾಂತರಿಸುವ ಮಾತುಕತೆ ನಡೆದಿದ್ದು ಈ ಮೂಲಕ ಅದನ್ನು ಅಭಿವೃದ್ಧಿಗೊಳಿಸಿ ಕೌಶಲಾಭಿವೃದ್ಧಿಗಾಗಿ ಉಪಯೋಗಿಸಿಕೊಳ್ಳಲಾಗುವುದು ಎಂದು ತಿಳಿಸಿದರು. ಬ್ರಿಡ್ಜ್ ಕಾಮಗಾರಿಯನ್ನು ಪ್ರಥಮ ಹಂತದಲ್ಲಿ ಕೈಗೊಳ್ಳಲಾಗುವುದು. ಇದಕ್ಕಾಗಿ ಹೈವೇಯನ್ನು ಹೊಸ ರೂಟ್‌ಗಳಿಗೆ ಜಾಗದ ಗುರುತಿಸಲಾಗಿದೆ. ಟೆಂಡರ್ ಆದ ತಕ್ಷಣ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.ರೋಟರಿ ಕ್ಲಬ್‌ನ ಅಧ್ಯಕ್ಷ ಡಾ/ರಮೇಶ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆ.ಆರ್.ಪಂಡಿತ್ ಕಾರ್ಯದರ್ಶಿ ಸಿ.ಹೆಚ್. ಗಫೂರ್ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡರು

Related posts

Leave a Reply