Header Ads
Breaking News

ಕನ್ನಂಗಾರ್ ಗರೋಡಿಯಲ್ಲಿ ವಾರ್ಷಿಕ ಜಾತ್ರಾ ಸಂಭ್ರಮ

ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ ಸರ್ವಧರ್ಮಿಗಳ ಸಂಗಮ ಕ್ಷೇತ್ರ ಕನ್ನಂಗಾರು ಶ್ರೀಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ವಾರ್ಷಿಕ ಜಾತ್ರಾ ಸಂಭ್ರದ ಸಂದರ್ಭದಲ್ಲಿ, ಜಿಲ್ಲಾ ರಾಜೋತ್ಸವ ಪುರಸ್ಕøತ ಸೂಡಾ ಕೋಟಿ ಪೂಜಾರಿಯವರಿಗೆ ಗರೋಡಿಯ ಆಡಳಿತ ಸಮಿತಿಯ ಮೂಲಕ ಸನ್ಮಾನಿಸಿ ಗೌರವಾರ್ಪಣೆ ಮಾಡಲಾಯಿತು.ಆ ಬಳಿಕ ಮಾತನಾಡಿದ ಗರೋಡಿ ಆಡಳಿತ ಸಮಿತಿಯ ಪ್ರಮುಖರಾದ ಸೀನ ಪೂಜಾರಿ, ಸುಮಾರು 500 ವರ್ಷಗಳ ಇತಿಹಾಸ ಹೊಂದಿರುವ ಈ ಕನ್ನಂಗಾರು ಶ್ರೀಬ್ರಹ್ಮ ಬೈದರ್ಕಳ ಗರೋಡಿ, ಬೈಹುಲ್ಲಿನ ಮಣ್ಣಗೋಡೆಯದ್ದಾಗಿದ್ದು ಸಣ್ಣ ಕೂಡು-ಕಟ್ಟು ಹೊಂದಿರುವ ಈ ಗರೋಡಿಯ ಸಮಗ್ರ ಜೀರ್ಣೋದ್ಧಾರವನ್ನು ಜಾತಿ ಮತ ಬೇಧವಿಲ್ಲ ಎಲ್ಲರ ಸಹಕಾರದಿಂದ ನಡೆಸುವ ಮೂಲಕ ಸರ್ವಧರ್ಮಿಯರ ಸಂಗಮ ಕ್ಷೇತ್ರವಾಗಿ ಈ ಗರೋಡಿ ಇಂದಿಗೂ ಬೆಳಗುತ್ತಿದೆ ಎಂದರು. ಈ ಸಂದರ್ಭ ಗರೋಡಿಯ ಪ್ರಧಾನ ಅರ್ಚಕ ಗಿರಿಧರ್ ಪೂಜಾರಿ ಸಹಿತ ಆಡಳಿತ ಸಮಿತಿಯ ಪ್ರಮುಖರು ಜೊತೆಗಿದ್ದರು.

Related posts

Leave a Reply

Your email address will not be published. Required fields are marked *