Header Ads
Header Ads
Breaking News

ಕನ್ನಡದಲ್ಲಿ ಬರುತ್ತಿದೆ ಮತ್ತೊಂದು ಸಿನಿಮಾ “ಅವನು ಅವಳಾಗಿರುವ” ಕಥೆ.

 ಮೂರು ವರ್ಷದ ಹಿಂದೆ ಕನ್ನಡದಲ್ಲಿ ನಾನು ಅವನಲ್ಲ ಅವಳು ಎಂಬ ಸಿನಿಮಾ ಬಂದಿತ್ತು. ಅದರಲ್ಲಿ ಅವನು ಅವಳಾಗುವ ಕಥೆ ಇತ್ತು. ಇದೀಗ ಕನ್ನಡದಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ. ಅದು ಅವನು ಅವಳಾಗಿರುವ ಕಥೆ. ಕಾಜಲ್ ನಟಿಸುತ್ತಿರುವ ಸಿನೆಮಾ. ಕಾಜಲ್ ಯಾರು ಎಂಬ ಬಗ್ಗೆ ಸ್ಟ್ರೋರಿ ಇಲ್ಲಿದೆ..ಹುಡುಗನಾಗಿ ಹುಟ್ಟಿ ನಂತರ ತನ್ನ ಸ್ವಾ ಇಚ್ಚೆಯಿಂದ ಹುಡುಗಿಯಾಗಿ ಪರಿವರ್ತನೆಗೊಂಡಿರುವ ಉಡುಪಿಯ ಕಾಜಲ್ ಲವ್ ಬಾಬಾ ಎಂಬ ಸಿನೆಮಾದಲ್ಲಿ ಹಿರೋಯಿನ್ ಆಗಿ ನಟಿಸುತ್ತಿದ್ದಾಳೆ. ಇದು ಕನ್ನಡದ ಪ್ರಥಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿದೆ. ಇದುವರೆಗೆ ತೃತೀಯ ಲಿಂಗಿಗಳನ್ನು ಅಥವಾ ಮಂಗಳಮುಖಿಯರನ್ನು ಸಿನಿಮಾಗಳಲ್ಲಿ ಕಾಮಿಡಿ ಪಾತ್ರಗಳಲ್ಲಿ ಅಥಾವಾ ವಿಲನ್ ಪಾತ್ರಗಳಲ್ಲಿ ತೋರಿಸುತ್ತಿದ್ದರು. ಈ ಪಾತ್ರಗಳನ್ನು ಕೂಡಾ ಅವರಿಂದಲೇ ಮಾಡಿಸದೇ ಗಂಡಸರಿಂದಲೇ ಮಾಡಿಸುತ್ತಿದ್ದರು. ಆದರೆ ಈಗ ತೃತೀಯ ಲಿಂಗಿಗಳನ್ನು ಹಿರೋಯಿನ್ ಆಗಿ ರೂಪಿಸುವ ಮಟ್ಟಿಗೆ ಮಾನಸಿಕತೆ ಬದಲಾಗಿದೆ. ಇದು ತೃತೀಯ ಲಿಂಗಿಗಳಿಗೆ ದೊರಕುತ್ತಿರುವ ಗೌರವವೂ ಹೌದು.

 

Related posts

Leave a Reply