Header Ads
Breaking News

ಕನ್ನಡ ಅನುವಾದಗಳಿಂದ ವಿಶ್ವ ಸಾಹಿತ್ಯ ಪ್ರವೇಶ

ಉಜಿರೆ: “ಎಲ್ಲಾ ಭಾಷೆಯ ಸಾಹಿತ್ಯದ ಅಧ್ಯಯನ ಮಾಡಲಾಗದಿದ್ದರೂ ಇಂದಿನ ಕನ್ನಡ ಅನುವಾದಗಳು ನಮಗೆ ಆ ಸಾಹಿತ್ಯದ ರೂಪವನ್ನು ತೋರಿಸಿ ಕೊಟ್ಟಿವೆ. ಅನುವಾದಗಳಿಂದಾಗಿ ಶೇಕ್ಸ್‌ಪಿಯರ್, ಯೇಟ್ಸ್‌ನಂತಹ ಕವಿಗಳು ನಮಗೆ ಮತ್ತಷ್ಟು ಹತ್ತಿರವಾಗಿದ್ದಾರೆ” ಎಂದು ವಿಮರ್ಶಕ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಟಿ.ಪಿ.ಅಶೋಕ್ ನುಡಿದರು.

ಇವರು ಶ್ರೀ ಧ.ಮಂ. ಕಾಲೇಜಿನಲ್ಲಿ ಕನ್ನಡ ಸಂಘ ಹಾಗೂ ನೀನಾಸಂ ಪ್ರತಿಷ್ಠಾನ ಹೆಗ್ಗೋಡು ಇದರ ಸಹಯೋಗದಲ್ಲಿ ನಡೆದ ವಿಶ್ವಸಾಹಿತ್ಯ ಪ್ರವೇಶ – ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕೀರಣವನ್ನು ಉದ್ಘಾಟಿಸಿ ಮಾತನಾಡುತ್ತಾ ” ಗ್ರೀಕ್ ನಾಟಕಗಳು ಮನುಷ್ಯರನ್ನು ಕುಲದ ಸಮಸ್ಯೆಯ ನೆಲೆಯಲ್ಲಿ ವಿವರಿಸಿದರೆ ಶೇಕ್ಸ್ ಪಿಯರ್ ನಾಟಕಗಳು ರಾಜಕೀಯ ವ್ಯವಸ್ಥೆಯ ಸಮಸ್ಯೆಗಳನ್ನು ಹೇಳುತ್ತವೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್. ಸತೀಶ್ ಚಂದ್ರ ವಹಿಸಿದ್ದರು. ಶ್ರೀ ಧ. ಮಂ. ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಟಿ.ಪಿ. ಅಶೋಕ್, ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ನಿತ್ಯಾನಂದ ಶೆಟ್ಟಿ, ಖ್ಯಾತ ಚಿಂತಕರಾದ ಮನೋಹರ್ ಸಾಲಿಮಠ್ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿಗೆ ಚಾರ್ಲಿ ಚಾಪ್ಲಿನ್ ಅಭಿನಯದ ‘ಮಾರ್ಡನ್ ಟೈಮ್ಸ್’ ಅಕಿರಾ ಕುರೊಸವ ನಿದೇರ್ಶನದ ‘ಡ್ರೀಮ್ಸ್’ ಇರಾನ್ ಮೂಲದ ‘ಕಲರ್‍ಸ್ ಅಫ್ ಪ್ಯಾರಡೈಸ್’ ಸಿನೆಮಾಗಳು ಪ್ರದರ್ಶಿಸಲಾಯಿತು. ನಂತರ ಸಿನೆಮಾದ ಕುರಿತಾದ ಸಂವಾದ ಕಾರ್ಯಕ್ರಮ ನಡೆಯಿತು.

ಕನ್ನಡ ಸೇರಿದಂತೆ ಮತ್ತಿತರ ವಿಬಾಗದ ಪ್ರಾಧ್ಯಾಪಕರು ಉಪಸ್ಥಿತರಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ. ಸಂಪತ್ ಕುಮಾರ್ ಸ್ವಾಗತಿಸಿದರು. ಡಾ. ಕೆ.ವಿ. ನಾಗರಾಜಪ್ಪ ವಂದಿಸಿ, ಡಾ. ಬೋಜಮ್ಮ ನಿರೂಪಿಸಿದರು.

Related posts

Leave a Reply

Your email address will not be published. Required fields are marked *