Header Ads
Header Ads
Breaking News

ಕನ್ನಡ ಪ್ಲಸ್‌ವನ್ ತರಗತಿಗೆ ಚಾಲನೆ ಮಂಜೇಶ್ವರದಲ್ಲಿ ಜಿಲ್ಲಾ ಮಟ್ಟದ ನೋಂದಾಣಿಯ ಉದ್ಘಾಟನೆ

ಕನ್ನಡ ಪ್ಲಸ್ ವನ್ ತರಗತಿಗಳಿಗೆ ಜಿಲ್ಲಾ ಮಟ್ಟದ ನೋಂದಣಿಗೆ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮಕ್ಕೆ ಮಂಜೇಶ್ವರ ಬ್ಲೋಕ್ ಪಂಚಾಯತ್‌ನಲ್ಲಿ ಚಾಲನೆ ದೊರಕಿತು.ಬ್ಲೋಕ್ ಪಂಚಾಯತ್ ಅಧ್ಯಕ್ಷ ಎ ಕೆ ಎಂ ಅಶ್ರಫ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಯ ಕ್ರಮವನ್ನು ಮಂಜೇಶ್ವರ ಶಾಸಕ ಪಿ. ಬಿ ಅಬ್ದುಲ್ ರಜಾಕ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ಭಾಷಾ ಅಲ್ಪ ಸಂಖ್ಯಾತರ ರಕ್ಷಣೆಯ ಅಗತ್ಯ ಕ್ರಮಕ್ಕೆ ತಾನು ಸದಾಬದ್ದನಾಗಿದ್ದೇನೆ. ಇಲ್ಲಿನ ವಿದ್ಯಾಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು. ಇದು 2015ರಲ್ಲಿ ಅರಂಭಗೊಂಡ ಯೋಜನೆಯಾಗಿದೆ. ಕನ್ನಡ ಬಾಷೆಯಲ್ಲಿ ವಿಧಾನ ಸಭೆಯಲ್ಲಿ ಪ್ರತಿಜ್ಞ ಸ್ಟೀಕರಿಸಿದ ಒಬ್ಬ ಶಾಸಕನಾಗಿದ್ದೇನೆ ಎಂದು ಹೇಳಿದರು.ಈ ಸಂದರ್ಭ ವೇದಿಕೆಯಲ್ಲಿ ಮಮತಾ ದಿವಾಕರ್, ರೂಪವಾಣಿ ಭಟ್, ಮುಸ್ತಫ ಉದ್ಯಾವರ, ಸದಾಶಿವ, ಪ್ರದೀಪ್, ಪ್ರಸಾದ್ ರೈ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.

Related posts

Leave a Reply