Header Ads
Header Ads
Breaking News

ಕನ್ನಡ ಮಾಧ್ಯಮಕ್ಕೆ ಮಲೆಯಾಳಂ ಶಿಕ್ಷಕರ ನೇಮಕಾತಿ ಪಿಎಸ್‌ಸಿ ರಾಂಕ್ ಪಟ್ಟಿ ರದ್ದುಗೊಳಿಸಲು ಆಗ್ರಹ ಮೀಸಲಾತಿ ನಿಯಮ ಬುಡಮೇಲು ಮಾಡಿರುವುದಾಗಿ ಆರೋಪ

ಮಂಜೇಶ್ವರ: ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡ ಶಾಲೆಗಳಲ್ಲಿ ಕನ್ನಡ ಬಲ್ಲ ಶಿಕ್ಷಕರ ಹುದ್ದೆಗಳಿಗೆ ಪಿ.ಎಸ್.ಸಿ ನಡೆಸಿದ ಪರೀಕ್ಷೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ರಾಂಕ್ ಪಟ್ಟಿ ಪ್ರಕಟವಾಗಿದ್ದು, ಪೂರ್ಣ ಮಲೆಯಾಳ ತಿಳಿದವರೇ ಪಟ್ಟಿಯಲ್ಲಿದ್ದಾರೆ.ಹೊರ ಜಿಲ್ಲೆಗಳ ಅಭ್ಯರ್ಥಿಗಳೇ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದು, ಇವರಲ್ಲಿ ಕನ್ನಡ ಬಲ್ಲವರು ಯಾರು ಇಲ್ಲ ಎಂದು ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧಕ್ಷ ಹರ್ಷಾದ್ ವರ್ಕಾಡಿ ಆರೋಪಿಸಿದ್ದಾರೆ.

ಒಟ್ಟು 12ಹುದ್ದೆಗಳ ರಾಂಕ್ ಲಿಸ್ಟ್ ಪ್ರಕಟವಾಗಿದ್ದು, ಈ ಕನ್ನಡ ಮೀಸಲು ಹುದ್ದೆಗಳಲ್ಲಿ ಕನ್ನಡ ಬಲ್ಲವರು ಯಾರು ಇಲ್ಲ. ಈಗಾಗಲೇ ಪ್ರಕಟಗೊಂಡ ಪ್ರೌಢಶಾಲಾ ಸಹಾಯಕ ದೈಹಿಕ ಶಿಕ್ಷಕ ಕನ್ನಡ ಮಾಧ್ಯಮ ವಿಭಾಗದ ರಾಂಕ್ ಪಟ್ಟಿಯಲ್ಲಿ 12 ಮಂದಿ ಮಲೆಯಾಳಿಗರು ಆಯ್ಕೆಗೊಂಡಿದ್ದು, ಕೂಡಲೇ ಈ ರಾಂಕ್ ಪಟ್ಟಿ ರದ್ದುಗೊಳಿಸಿ, ಕನ್ನಡ ಮೀಸಲು ಹುದ್ದೆಗಳ ನೇಮಕಾತಿ ಮಾನದಂಡಗಳಲ್ಲಿ ಅಗತ್ಯ ಬದಲಾವಣೆ ಮಾಡಿ ಮೀಸಲಾತಿ ನಿಯಮ ಬುಡಮಮೇಲುಗೊಳಿಸುವುದನ್ನು ಕೊನೆಗೊಳಿಸಬೇಕು ಎಂದು ಹರ್ಷಾದ್ ವರ್ಕಾಡಿಯವರು ಕೇರಳ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ವರದಿ: ರೆಹಮಾನ್ ಉದ್ಯಾವರ ಮಂಜೇಶ್ವರ