Header Ads
Breaking News

ಕನ್ನಡ ಮಾಸ ಪತ್ರಿಕೆ ಅಮೃತ ಪ್ರಕಾಶಕ್ಕೆ 5ವರ್ಷ: 5ನೇ ವಾರ್ಷಿಕೋತ್ಸವ ಸಂಚಿಕೆ ಬಿಡುಗಡೆ

ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಕನ್ನಡ ಮಾಸ ಪತ್ರಿಕೆ ಅಮೃತ ಪ್ರಕಾಶ ಇಂದಿಗೆ 5ನೇ ವರ್ಷವನ್ನು ಪೂರೈಸಿಕೊಂಡಿದೆ. ಈ ಪ್ರಯುಕ್ತ ಪತ್ರಿಕೆಯ 5ನೇ ವಾರ್ಷಿಕ ಸಸಂಚಿಕೆ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಿದ್ರು. ಈ ಸಂದರ್ಭ ಮಾತನಾಡಿದ ಅವರು, ಪತ್ರಿಕೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ರು..ಇನ್ನು ಅಮೃತ ಪ್ರಕಾಶ ಪತ್ರಿಕೆಯ ೫ನೇ ವಾರ್ಷಿಕ ಸಂಚಿಕೆಯನ್ನು ಊರ್ಮಿಳಾ ರಮೇಶ್ ಕುಮಾರ್ ಬಿಡುಗಡೆಗೊಳಿಸಿದ್ರು.
ಇನ್ನು ಮುಖ್ಯ ಅತಿಥಿಗಳಾಗಿ ಕಾವೂರು ಬಂಟರ ಸಂಘದ ಅಧ್ಯಕ್ಷ’ರು, ಉದ್ಯುಮಿಗಳಾದ ಆನಂದ್ ಶೆಟ್ಟಿ ಅಡ್ಯಾರ್ ಹಾಗೂ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಮಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ ಭಾಗವಹಿಸಿದ್ದಾರೆ. ಈ ಸಂದರ್ಭ ಅಮೃತ ಪ್ರಕಾಶ ಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು, ಉಪ ಸಾಂಪಾದಕರಾದ ಡಾ. ಕಾಸರಗೋಡು ಅಶೋಕ್ ಕುಮಾರ್, ಲೇಖಕಿ ಕವಯಿತ್ರಿ ಡಾ. ಅರುಣಾ ನಾಗರಾಜ್ ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *