Header Ads
Header Ads
Breaking News

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಟ್ಲ ಮಂಕುಡೆ ಸ.ಹಿ.ಪ್ರಾ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ವಿಟ್ಲ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪರ್ತಿಪ್ಪಾಡಿ ಹಾಗೂ ಕುಡ್ತಮುಗೇರು ಶಾಖೆಯ ಎಸ್‌ವೈಎಸ್, ಎಸ್‌ಕೆಎಸ್‌ಎಸ್‌ಎಫ್, ವಿಖಾಯ ವತಿಯಿಂದ ಕೊಳ್ನಾಡು ಗ್ರಾಮದ ಮಂಕುಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಶಾಲೆಯ ಸುತ್ತಮುತ್ತಲಿನಲ್ಲಿ ಬೆಳೆದಿರುವ ಗಿಡಗಟ್ಟಿ ಹಾಗೂ ಕಸತ್ಯಾಜ್ಯಗಳನ್ನು 50ಕ್ಕಿಂತಲೂ ಅಧಿಕ ಕಾರ್ಯಕರ್ತರು ಬೆಳಿಗ್ಗೆನಿಂದ ಮಧ್ಯಾಹ್ನದ ವರೆಗೆ ನಡೆದ ಶ್ರಮದಾನ ಕಾರ್ಯದ ವೇಳೆ ಸ್ವಚ್ಛಗೊಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಗಟ್ರೂಡ್ ಡಿ ಸೋಜ ಅವರು ಕಾರ್ಯಕರ್ತರರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭ ಎಸ್‌ಕೆಎಸ್‌ಎಸ್‌ಎಫ್ ವಿಟ್ಲ ವಲಯ ಪ್ರಧಾನ ಕಾರ್ಯದರ್ಶಿ ಸಿ.ಎಚ್ ಇಬ್ರಾಹಿಂ ಮುಸ್ಲಿಯಾರ್, ಸಾಲೆತ್ತೂರು ಕ್ಲಸ್ಟರ್ ಕಾರ್ಯದರ್ಶಿ ಬಿ.ಎಂ ಅಲಿ ಮೌಲವಿ, ವಿಟ್ಲ ವಲಯ ವಿಖಾಯ ಕನ್ವೀನರ್ ಕೆಎ ಹಸೈನಾರ್ ಮುಸ್ಲಿಯಾರ್, ಎಸ್ಕೆಎಸ್‌ಎಸ್ ಪರ್ತಿಪ್ಪಾಡಿ ಕ್ಲಸ್ಟರ್ ಕಾರ್ಯದರ್ಶಿ ವಿಎ ಉಮ್ಮರ್ ದಾರಿಮಿ, ಪರ್ತಿಪ್ಪಾಡಿ ಶಾಖೆಯ ಅಧ್ಯಕ್ಷ ನಾಸರುದ್ದೀನ್, ಹಕೀಂ ಕುಡ್ತಮುಗೇರು, ಪಿಎಂ ಹಕೀಂ ಪರ್ತಿಪ್ಪಾಡಿ, ಮಾಮು ರಾಧುಕಟ್ಟೆ, ಅನ್ಸಾರಿ ಹನೀಫ್ ಕುಡ್ತಮುಗೇರು, ಅಹ್ಮದ್ ಕುಂಞ ಸುರುಳಿಮೂಲೆ, ಹಕೀಂ ಮೌಲವಿ ಕುಡ್ತಮುಗೇರು, ಹಸೈನಾರ್ ಪರ್ತಿಪ್ಪಾಡಿ, ಆ.ಕೆ ರಂಮ್ಲಾ ಕುಡ್ತಮುಗೇರು, ಸುಲೈಮಾನ್ ಪೆರಪಡ್ಪು, ಹಂಝ ಹನೀಫಿ ಪರ್ತಿಪ್ಪಾಡಿ, ಮಂಕುಡೆ ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ವಿಮಲಾ ಲಂಬೋದರ, ಕೊಳ್ನಾಡು ಗ್ರಾಮ ಪಂಚಾಯಿತಿ ಸದಸ್ಯರಾದ ಪವಿತ್ರ ಪೂಂಜ, ಹರೀಶ ಎಂ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಅಡ್ಯಂತಾಯ, ಹಳೆ ವಿದ್ಯಾರ್ಥಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಮಂಕುಡೆ, ವಿಜಯಕ್ಷ್ಮೀ ಭಟ್ ಮೊದಲಾದವರು ಭಾಗವಹಿಸಿದ್ದರು.

 

Related posts

Leave a Reply

Your email address will not be published. Required fields are marked *