Header Ads
Breaking News

ಕನ್ಯಾನದ ಚೆಡವು ದುಲ್‍ಪುಖಾರ್ ಸೇವಾ ಸಂಘ : 21ನೇ ವಾರ್ಷಿಕೋತ್ಸವ

ವಿಟ್ಲ: ಕನ್ಯಾನ ಗ್ರಾಮದ ಚೆಡವು ದುಲ್‍ಪುಖಾರ್ ಸೇವಾ ಸಂಘದ 21ನೇ ವಾರ್ಷಿಕೋತ್ಸವ ಹಾಗೂ ಮದನೀಯಂ ಮಹಾಸಂಗಮ ಮತ್ತು ತಾಜುಶ್ಯರೀಅ ಅಲಿ ಕುಂಞ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮ ಕನ್ಯಾನ ರಹ್ಮಾನೀಯ ಜುಮಾ ಮಸೀದಿ ವಠಾರದಲ್ಲಿ ಎಪ್ರಿಲ್ 7ರಂದು ನಡೆಯಲಿದೆ ಎಂದು ಜಿಸಿಸಿ ಘಟಕದ ಅಧ್ಯಕ್ಷ ಬಶೀರ್ ಚೆಡವು ತಿಳಿಸಿದರು.

ಅವರು ವಿಟ್ಲ ಪ್ರೆಸ್ ಕ್ಲಬ್‍ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಡ ಮತ್ತು ಅನಾಥ ಮಕ್ಕಳ ಸೇವೆಯಲ್ಲಿ 21 ವರ್ಷ ಪೂರೈಸಿದ ದುಲ್‍ಪುಖಾರ್ ಸೇವಾ ಸಂಘ 21ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಈ ಕಾರ್ಯ ಹಮ್ಮಿಕೊಂಡಿದೆ. ಎಪ್ರಿಲ್ 7ರಂದು ಅಸ್ಸಯ್ಯಿದ್ ಕೆ.ಎಸ್ ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ಅವರ ನೇತೃತ್ವದಲ್ಲಿ ಮಖಾಂ ಝಿಯಾರತ್ ಹಾಗೂ ಬದ್ರ್ ಮೌಲಿದ್ ಮಜ್ಲಿಸ್ ನಡೆಯಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೆ.ಎಂ ಇಬ್ರಾಹಿಂ ಫೈಝಿ ಕನ್ಯಾನ ಉಸ್ತಾದ್ ನೇತೃತ್ವ ವಹಿಸಲಿದ್ದಾರೆ. ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಕುಕ್ಕಾಜೆ ಮಸೀದಿ ಖತೀಬು ಮಹಮ್ಮದ್ ನಿಯಾಝ್ ಕಾಮಿಲ್ ಸಖಾಫಿ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದ ಅವರು ಈ ಎಲ್ಲಾ ಕಾರ್ಯಕ್ರಮಗಳು ಕೋವಿಡ್ ನಿಯಮದ ಚೌಕಟ್ಟಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ದುಲ್‍ಪುಖಾರ್ ಸೇವಾ ಸಂಘದ ಮಾರ್ಗದರ್ಶಕ ಕೆ.ಎಂ ಅಶ್ರಪ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಭಾತಿಷ್ ಕಣಿಯೂರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *