Header Ads
Header Ads
Breaking News

ಕನ್ಯಾನ: ಮಟ್ಕಾ ಅಡ್ಡೆ ಮೇಲೆ ಡಿಸಿಐಬಿ ಪೊಲೀಸರ ದಾಳಿ

ವಿಟ್ಲ : ಡಿಸಿಐಬಿ ಪೊಲೀಸ್ ನಿರೀಕ್ಷಕರ ಆದೇಶದಂತೆ ಡಿಸಿಐಬಿ ತಂಡವು ಬಂಟ್ವಾಳ ತಾಲೂಕು ವಿಟ್ಲದ ಕನ್ಯಾನ ಕೆಳಗಿನ ಪೇಟೆಯಲ್ಲಿ ನಡೆಯುತ್ತಿದ್ದ ಅಕ್ರಮ ಮಟ್ಕಾ ಅಡ್ಡೆಗೆ ಧಾಳಿ ನಡೆಸಿ ದಯಾನಂದ ನಾಯಕ್, ರೋಹಿತ್ ಬಿ ಎಂಬವರನ್ನು ಬಂಧಿಸಿ ಅವರಿಂದದ ಸುಮಾರು 4,140 ನಗದು ಹಾಗೂ ಮಟ್ಕಾ ಚೀಟಿಯನ್ನು ವಶಪಡಿಸಿಕೊಂಡಿರುತ್ತಾರೆ. ಆರೋಪಿಗಳನ್ನು ಮುಂದಿನ ಕ್ರಮದ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.ಕಾರ್ಯಾಚರಣೆಯಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಸುನೀಲ್ ವೈ ನಾಯ್ಕ್‌ರವರ ನೇತ್ರತ್ವದ ತಂಡದಲ್ಲಿ ಸಿಬ್ಬಂದಿಯವರಾದ ನಾರಾಯಣ, ವಾಸು ನಾಯ್ಕ, ಲಕ್ಷ್ಮಣ ಕೆ.ಜಿ, ಪ್ರವೀಣ್ ಎಂ, ತಾರಾನಾಥ್, ಪ್ರವೀಣ್ ರೈ ಮತ್ತು ಶೋನ್‌ಶಾರವರು ಭಾಗವಹಿಸಿರುತ್ತಾರೆ.

Related posts

Leave a Reply