Header Ads
Header Ads
Breaking News

ಮಂಜೇಶ್ವರದಲ್ಲಿ ಕಮ್ಯುನಿಸ್ಟ್ ಪಕ್ಷದ ನೇತಾರ ಕಾಮ್ರೆಡ್ ಸಿ.ಕೆ ಚಿಪ್ಪಾರ್ ಸ್ಮೃತಿ ದಿನಾಚರಣೆ

ಭಾರತೀಯ ಕಮ್ಯುನಿಸ್ಟ್ ಪಕ್ಷದ ನೇತಾರ ಹಾಗೂ ಸಾಮಾಜಿಕ, ಸಾಂಸ್ಕೃತಿಕ, ರಂಗಗಳಲ್ಲಿ ಸಕ್ರಿಯರಾಗಿದ್ದ ಕಾಮ್ರೆಡ್ ಸಿ.ಕೆ ಚಿಪ್ಪಾರ್ ರವರ ಸ್ಮೃತಿ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ವಾರ್ಷಿಕದ ಭಾಗವಾಗಿ ಲಾಲ್‌ಬಾಗ್‌ನಲ್ಲಿ ಅವರ ವಸತಿ ಸಮೀಪವಿರುವ ಸ್ಮೃತಿ ಮಂಟಪದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಸಿಪಿಐ ಸುಬ್ಬಯ್ಯ ಕಟ್ಟೆ ಬ್ರಾಂಚ್ ಕಾರ್ಯದರ್ಶಿ ಎಸ್ ಅಚ್ಚುತ ರಾವ್ ಧ್ವಜಾರೋಹಣ ಗೈದರು.
ಲಾರೆನ್ಸ್ ಡಿ ಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿ ಪಿ ಐ ರಾಜ್ಯ ಸಮಿತಿ ಸದಸ್ಯ ಟಿ ಕೃಷ್ಣನ್ ನೇತಾರರಾದ ಬಿ ವಿ ರಾಜನ್, ಜಯರಾಮ್ ಬಲ್ಲಂಗುಡೇಲ್ ಎಂ ಸಂಜೀವ ಶೆಟ್ಟಿ, ಯಸ್ ರಾಮಚಂದ್ರ, ರಾಮಕೃಷ್ಣ ಕಡಂಬಾರ್ ಮೊದಲಾದವರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *