Header Ads
Header Ads
Breaking News

ಕರವೇ ಟೋಲ್ ವಿರೋಧಿ ಹೋರಾಟಕ್ಕೆ ದಸಂಸ ಬೆಂಬಲ,ಪಡುಬಿದ್ರಿ ಪೇಟೆ ಸಮಸ್ಯೆ ಸರಿ ಪಡಿಸಲು ದಸಂಸ ಒತ್ತಾಯ.

ಹೆಜಮಾಡಿ ಟೋಲ್‌ಗೇಟ್‌ನಲ್ಲಿ ನಡೆಯುತ್ತಿರುವ ಸುಲಿಗೆ ವಿರುದ್ಧ ಅನಿರ್ಧಿಷ್ಟಾವಾಧಿ ಪ್ರತಿಭಟನೆ ಹಮ್ಮಿಕೊಂಡಿರುವ ಕರವೇ ಹೋರಾಟಕ್ಕೆ, ದಸಂಸ ಬೆಂಬಲ ವ್ಯಕ್ತ ಪಡಿಸುವ ಮೂಲಕ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದ್ದು, ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆಯಲ್ಲಿ ಪ್ರತಿಭಟನಾಗಾರರ ಸಂಖ್ಯೆಯಲ್ಲೂ ಹೆಚ್ಚಳ ಕಂಡಿದೆ.

ವಿವಿಧ ಸಂಘಟನೆಗಳ ಮೂಲಕ ಹೆಜಮಾಡಿ ಟೋಲ್ ವಿರುದ್ಧ ಹೋರಾಟಗಳು ನಡೆದರೂ ಗುರಿ ಮುಟ್ಟದ ಹಿನ್ನಲೆಯಲ್ಲಿ, ದಿಟ್ಟ ನಿರ್ಧಾರ ಕೈಗೊಂಡ ಕರ್ನಾಟಕ ರಕ್ಷಣಾ ವೇದಿಕೆ ಪಡುಬಿದ್ರಿ ಪೇಟೆಯ ಬಳಿಯ ಟೆಂಪೋ ನಿಲ್ದಾಣದ ಬಳಿಯಲ್ಲಿ ಪೆಂಡಲ್ ನಿರ್ಮಿಸಿ ಅನಿರ್ಧಿಷ್ಟಾವಾಧಿ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ಜನರಿಗೆ ಭರವಸೆಯೊಂದು ಮೂಡಿದೆ. ನಿರಂತರ ರಾತ್ರಿ ಹಗಲೆನ್ನದೆ ನಡೆಯುತ್ತಿರುವ ಈ ಪ್ರತಿಭಟನೆಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿದೆ. ಆದರೆ ವಿಪರ್ಯಾವೆಂದರೆ ಸಂಘಟನೆಗಳಿಗಿರುವ ಜನ ಪರ ಕಾಳಜಿ ಜನರಿಂದ ಮತ ಪಡೆದು ಅಧಿಕಾರ ಅನುಭವಿಸಿದ-ಅನುಭವಿಸುತ್ತಿರುವ ಜನಪ್ರತಿನಿಧಿಗಳಿಗೆ ಇಲ್ಲದಿರುವುದು. ಜನಪರವಾಗಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಜನಪ್ರತಿನಿಧಿಗಳು ಗೈರಾಗುವ ಮೂಲಕ, ನಮಗೆ ಚುನಾವಣಾ ಸಂದರ್ಭದಲ್ಲಿ ಮತದ ರೂಪದಲ್ಲಿ ಜನರಿದ್ದರೆ ಸಾಕು ವಿನಃ ಅವರ ಒಳಿತು ಕೆಡುಕುಗಳು ನಮಗೆ ಅಗತ್ಯವಿಲ್ಲ ಎಂಬಂತ್ತಿದೆ ಜನಪ್ರತಿನಿಧಿಗಳ ವರ್ತನೆ ಎಂಬುದು ಪ್ರತಿಭಟನಾಗಾರರ ಆಕ್ರೋಶದ ನುಡಿಇಂದಿನ ಪ್ರತಿಭಟನೆಗೆ ಬೆಂಬಲ ನೀಡಿದ ದಸಂಸ ಸಂಘಟನೆಯ ಪ್ರಮುಖರಾದ ಲೋಕೇಶ್ ಕಂಚಿನಡ್ಕ ಮಾತನಾಡಿ, ಸ್ಥಳೀಯರಿಂದ ಟೋಲ್ ವಸೂಲಿ ನಿಲ್ಲಿಸುವುದು ಮಾತ್ರವಲ್ಲ, ಪಡುಬಿದ್ರಿ ಪೇಟೆಯಲ್ಲಿ ನಡೆದ ಅವೈಜ್ಞಾನಿಕ ಕಾಮಗಾರಿಗಳಾದ ಅಗಲ ಕಿರಿದಾದ ಹೆದ್ದಾರಿ, ಎಲ್ಲೂ ನಿರ್ಮಿಸದ ಕಿರಿದಾದ ರಸ್ತೆ ವಿಭಜಕ, ಅರ್ಧಕ್ಕೆ ನಿಲ್ಲಿಸಲಾದ ಸರ್ವಿಸ್ ರಸ್ತೆ, ಜನರಿಗೆ ನಡೆದಾಟ ನಡೆಸಲು ಫುಟ್‌ಪಾತ್ ಇಲ್ಲ, ಅಪಾಯಕಾರಿ ಕಾರ್ಕಳ ರಸ್ತೆ ಡೈವರ್ಶನ್ ಬಳಿ ಇಲ್ಲದ ಪೊಲೀಸ್ ಸೇವೆ, ಪೂರಕವಾದ ರಿಕ್ಷಾ, ಟೆಂಪೋ, ಕಾರು ನಿಲ್ದಾಣಗಳಿಲ್ಲ ಈ ಎಲ್ಲಾ ಸಮಸ್ಯೆಗಳನ್ನು ಶೀಘ್ರವಾಗಿ ಜಿಲ್ಲಾಧಿಕಾರಿಗಳು ಪರಿಶೀಲಿಸಿ ತುರ್ತು ಪರಿಹಾರ ಕಲ್ಪಿಸ ಬೇಕು, ತಪ್ಪಿದ್ದಲ್ಲಿ ದಸಂಸ ಜಿಲ್ಲಾಢಳಿತದ ನಿರ್ಲಕ್ಷ್ಯ ವಿರುದ್ಧ ಬೃಹತ್ ಹೋರಾಟ ನಡೆಸಲಿದೆ ಎಂದು ಗುಡುಗಿದರು.ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಆಗಮಿಸಿದ ಕಾಪು ತಹಶೀಲ್ದಾರ್ ಪ್ರತಿಭಟನಾಗಾರರಿಂದ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿಯವರಿಗೆ ವರದಿ ನೀಡುವ ಭರವಸೆಯೊಂದಿಗೆ ತೆರಳಿದ್ದಾರೆ.ಈ ಸಂದರ್ಭ ಕರವೇ ಮುಖ್ಯಸ್ಥ ಅನ್ಸಾರ್ ಅಹಮ್ಮದ್, ಆಸೀಫ್ ಆಪತ್ತ್ ಭಾಂದವ, ಕರುಣಾಕರ್ ಪೂಜಾರಿ, ಕೀರ್ತನ್, ಬುಡಾನ್ ಸಹೇಬ್ ಮುಂತಾದವರಿದ್ದರು.

Related posts

Leave a Reply