Header Ads
Header Ads
Breaking News

ಕರವೇ ಟೋಲ್ ಹೋರಾಟಕ್ಕೆ 20 ಕ್ರಿಕೆಟ್ ತಂಡಗಳ ಬೆಂಬಲ:ಟೆನಿಲ್ ಬಾಲ್ ಕ್ರಿಕೆಟ್ ಸಂಸ್ಥೆಯ ಜಿಲ್ಲಾಧ್ಯಕ್ಷ ಶರತ್ ಶೆಟ್ಟಿ ಘೋಷಣೆ.

ಬಹುತೇಕ ಟೋಲ್‌ಗೇಟ್‌ಗಳಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ಫ್ರೀ ಇದೆ, ಆದರೆ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಮಾತ್ರ ಸ್ಥಳೀಯರಲ್ಲೂ ಹಣ ಪಡೆಯುವ ಮಾಡುವ ಮೂಲಕ ನಮ್ಮನ್ನು ಸುಲಿಗೆ ಮಾಡುತ್ತಿದೆನವಯುಗ್ ಕಂಪನಿ, ಇಂಥಹ ಅನ್ಯಾಯವನ್ನು ತಡೆಯುವುದಕ್ಕಾಗಿ ಸ್ಥಳೀಯವಾದ ನಮ್ಮ 20 ಕ್ರಿಕೆಟ್ ತಂಡಗಳ 400ಮಂದಿಯ ಯುವಕರ ದಂಡು ಹೋರಾಟಕ್ಕೆ ಸಿದ್ಧರಾಗಿದ್ದು, ಕರವೇ ನಡೆಸುತ್ತಿರುವ ಹೋರಾಟಕ್ಕೆ ನಾವು ಬೆಂಬಲ ವ್ಯಕ್ತ ಪಡಿಸಿದ್ದೇವೆ ಎಂದರು.ಪಡುಬಿದ್ರಿಯ ಟೆಂಪೋ ನಿಲ್ದಾಣದಲ್ಲಿ ಕಳೆದ 9 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ನಾವು ಯಾವುದೇ ಹೋರಾಟದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ಅಪರೂಪ, ತಮ್ಮ ಸ್ವಾರ್ಥ ಸಾಧನೆಗಾಗಿ ನಡೆಯುವ ಹೋರಾಟಗಳನ್ನೇ ಇತ್ತೀಚಿನ ದಿನಗಳಲ್ಲಿ ನಾವು ಕಾಣುತ್ತಿದ್ದೇವೆ, ಆದರೆ ಇದೀಗ ಹೆಜಮಾಡಿ ಟೋಲ್ ವಿರುದ್ಧ ಬಹಳಷ್ಟು ಹೋರಾಟಗಾರು ಹೋರಾಟವನ್ನು ನಡೆಸಿ ಅರ್ಧದಲ್ಲಿ ಕೈ ಬಿಟ್ಟರೂ ಕೂಡಾ, ಕರ್ನಾಟಕ ರಕ್ಷಣಾ ವೇದಿಕೆ ಜನಪರವಾದ ತಮ್ಮ ಹೋರಾಟವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಹೋರಾಟದಲ್ಲಿ ನಂಬಿಕೆ ಹುಟ್ಟಿಸಿದೆ, ಆ ನಿಟ್ಟಿನಲ್ಲಿ ಅವರು ನಡೆಸುತ್ತಿರುವ ಹೋರಾಟವನ್ನು ನಾವು ಬೆಂಬಲಿಸುತ್ತಿದ್ದು ನ್ಯಾಯ ದೊರಕದಿದ್ದಲ್ಲಿ ಯಾವುದೇ ಮಟ್ಟದ ಹೋರಾಟಕ್ಕೂ ನಾವು ಸಿದ್ಧ ಎಂಬುದಾಗಿ ಎಚ್ಚರಿಸಿದ್ದಾರೆ.

ಈ ಸಂದರ್ಭ ವಿವಿಧ ಕ್ರಿಕೆಟ್ ತಂಡಗಳ ಪ್ರಮುಖರು ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

Related posts

Leave a Reply