
ಬೇಲೂರಿನ ಶ್ರೀ ಪಾಂಡುರಂಗ ಸ್ವಾಮಿ ದೇವಾಲಯದ ಎನ್ಎಸ್ಕೆಎಂಎಫ್ ಕರಾಟೆ ಶಾಲೆಯ ಕರಾಟೆ ಪಟುಗಳು ಮೈಸೂರಿನ ಕೆ.ಪಿ.ಟಿ.ಸಿ.ಲ್ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಮೈಸೂರು ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಿ ಶೇಕಡ 100ರಷ್ಟು ಫಲಿತಾಂಶ ಪಡೆದಿದ್ದು ಸಮಗ್ರ ಚಾಂಪಿಯನ್ಶಿಪ್ ಪಡೆಯಲು ಯಶಸ್ವಿಯಾಗಿದ್ದಾರೆ. ಈ ಪಂದ್ಯಾವಳಿಯಲ್ಲಿ ಬೇಲೂರಿನ ವಜ್ರಕಾಯ ಕರಾಟೆ ಶಾಲೆಯ ಹತ್ತು ಮಕ್ಕಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು 10 ಮಕ್ಕಳು ಕಾಟ ಮತ್ತು ಕುಮಿತೆ ವಿಭಾಗದಲ್ಲಿ ಪ್ರಶಸ್ತಿ ಮತ್ತು ಪಾರಿತೋಷಕಗಳನ್ನು ಪಡೆದಿರುತ್ತಾರೆ ಎಂದು ವಜ್ರಕಾಯ ಕರಾಟೆ ಶಾಲೆಯ ಮುಖ್ಯ ಶಿಕ್ಷಕರಾದ ಕೌಶಿಕ್ ರಾವ್ ತಿಳಿಸಿದರು.