Header Ads
Header Ads
Breaking News

ಕರಾಟೆ ಅತ್ಮ ರಕ್ಷಣೆಯ ಕಲೆ. ಕರಾಟೆ ಶಿಕ್ಷಣ ಇಂದಿನ ದಿನದಲ್ಲಿ ಅಗತ್ಯವಿದೆ. ಮೂಲ್ಕಿ-ಮೂಡುಬಿದರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿಕೆ.

ಕರಾಟೆ ಅತ್ಮ ರಕ್ಷಣೆಯ ಕಲೆ ಇಂದಿನ ದಿನದಲ್ಲಿ ಮಕ್ಕಳಿಗೆ ಇದರ ಶಿಕ್ಷಣ ಅಗತ್ಯವಾಗಿದೆ ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಅವರು ಕಿನ್ನಿಗೋಳಿಯ ರೋಟರಿ ಅಂಗ್ಲ ಮಾದ್ಯಮ ಪ್ರೌಢಶಾಲೆಯಲ್ಲಿ ದಕ್ಷಿಣ ಕನ್ನಡ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮಂಗಳೂರು ತಾಲೂಕು ಇವರ ಸಹಕಾರದಲ್ಲಿ ತಾಲೂಕು ಮಟ್ಟದ ಕರಾಟೆ ಪಂದ್ಯಾಟ-2018 ರ ಉದ್ಘಟನೆ ನೆರವೇರಿಸಿ ಮಾತನಾಡಿದರು.

ಹಿಂದಿನ ದಿನದಲ್ಲಿ ಬೇರೆ ದೇಶದಲ್ಲಿ ಕಾಣ ಸಿಗುತ್ತಿದ್ದ ಈ ಕಲೆ ಇಂದು ಎಲ್ಲಾ ಶಾಲೆಗಳಲ್ಲಿ ಕಲಿಸುವಂತಾಗಿದೆ, ಇದು ವಿದ್ಯಾರ್ಥಿಗಳನ್ನು ಮಾನಸಿಕ ಮತ್ತು ದೈಹಿಕವಾಗಿಯೂ ಸದೃಢವಾಗಿಸುತ್ತದೆ ಎಂದರು.ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜಿನಿ ಗುಜರನ್ ಅದ್ಯಕ್ಷೆತೆ ವಹಿಸಿದ್ದರು, ಈ ಸಂದರ್ಭ ಜಿಲ್ಲಾ ಪಂಚಾಯತ್ ಉಪಾದ್ಯಕ್ಷೆ ಕಸ್ತೂರಿ ಪಂಜ, ಕರಾಟೆ ಶಿಕ್ಷಕ ಈಶ್ವರ್ ಕಟೀಲ್, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಕೆ.ಬಿ ಸುರೇಶ್, ದೈಹಿಕ ಶಿಕ್ಷಣ ಪರಿವಿಕ್ಷಣಾಧಿಕಾರಿ ಆಶಾ ನಾಯಕ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ,ಎಚ್ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply