Header Ads
Header Ads
Breaking News

ಕರಾಟೆ ಕಣಕ್ಕಿಳಿದ ಮಂಗಳೂರು ಮೇಯರ್ ಕವಿತಾ ಸನಿಲ್‌ಗೆ ಚಿನ್ನದ ಪದಕ 2020ಕ್ಕೆ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ವಿಶ್ವಾಸ

 

ಒಂಭತ್ತು ವರುಷದ ಬಳಿಕ ಕರಾಟೆ ಕಣಕ್ಕಿಳಿದ ಮೇಯರ್ ಕವಿತಾ ಸನಿಲ್ ಸರಾಗವಾಗಿ ಜಯಗಳಿಸಿ ಚಿನ್ನದ ಪದಕ ಗಳಿಸಿದರು. ಈ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್‌ಗೆ ತಾನೂ ಅರ್ಹತೆ ಪಡೆಯುವ ವಿಶ್ವಾಸವಿದೆ ಎನ್ನುವುದನ್ನು ಸಾಬೀತುಪಡಿಸಿದರು.ಅಂತಿಮ ಹಣಾಹಣೆಯಲ್ಲಿ ಎದುರಾಳಿ ಕರಾಟೆಪಟು ನಿಶಾ ನಾಯಕ್ ಅವರನ್ನು 7-3 ಅಂಕಗಳಿಂದ ಕವಿತಾ ಸೋಲಿಸಿದರು. ಆರಂಭದಲ್ಲಿ ನಿಶಾ ತೀವ್ರಪೈಪೋಟಿ ನೀಡಿದರಲ್ಲಿ ಒಂದು ಬಾರಿ ಮೇಯರ್ ಸಮತೋಲನ ತಪ್ಪಿ ಬಿದ್ದರು.ಇನ್ನೊಮ್ಮೆ ಬೀಳುವಂತಾದರು.

ಒಮ್ಮೆ ಚೇತರಿಕೆ ಕಂಡ ನಿಶಾ 3-3 ಅಂಕ ಸಮಗೊಳಿಸಿದರೂ ಕೊನೆಯ ಕೆಲ ಸೆಕೆಂಡ್ ಗಳಲ್ಲಿ ಅಕ್ರಮಣಕಾರಿ ಪಂಚ್ ಹಾಗೂ ಕಿಕ್ ಮೂಲಕ ಮೇಯರ್ ಅಂಕವನ್ನು 7ಕ್ಕೇರಿಸಿ ವಿಜಯದ ನಗೆ ಬೀರಿದರು. ನಿಶಾ ಬೆಳ್ಳಿಗೆ ತೃಪ್ತಿ ಪಟ್ಟರೆ ಪೃಥಿ ಹಾಗೂ ಕಾವ್ಯಾ ಕಂಚಿನ ಪದಕ ಗೆದ್ದರು.