Header Ads
Header Ads
Breaking News

ಕರಾವಳಿಯನ್ನು ಕಡೆಗಣಿಸಿದ ಸರಕಾರ ಉಡುಪಿ ಜಿಲ್ಲಾ ಬಿಜೆಪಿ ಕೈಗಾರಿಕಾ ಪ್ರಕೋಷ್ಟಾ ಖಂಡನೆ.

ಕರಾವಳಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಸಮ್ಮಿಶ್ರ ಸರಕಾರ ಈ ಸಲದ ಬಜೆಟ್ನಲ್ಲಿ ಕರಾವಳಿಗೆ ಬೇಕಾದಷ್ಟು ಅನುದಾನಗಳನ್ನು ಮತ್ತು ಉತ್ತಮ ಯೋಜನೆಗಳನ್ನು ಸಮ್ಮಿಶ್ರ ಸರಕಾರ ನೀಡಬಹುದೆನ್ನುವ ನೀರೀಕ್ಷೆ ಇತ್ತು, ಆದರೆ ಈ ಸರಕಾರ ಉಡುಪಿ ಜಿಲ್ಲೆಯಲ್ಲಿ ಜನರಿಂದ ಆಯ್ಕೆಯಾದ ಎಲ್ಲಾ ಶಾಸಕರು ಬಿಜೆಪಿ ಪಕ್ಷದವರೆನ್ನುವ ಕಾರಣಕ್ಕೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆಯ ಕೈಗಾರಿಕಾ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಇನ್ನಾ ಉದಯ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.      

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕರಾವಳಿ ಭಾಗದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ, ಸುವ್ಯವಸ್ಥೆ ಬಂದರು, ಕೊಂಕಣ ರೈಲ್ವೆಗಳಿವೆ ಮತ್ತು ವಿದ್ಯುತ್ ಘಟಕಗಳು ಬೇಕಾದಷ್ಟು ಪೂರಕವಾರ ಕೈಗಾರಿಕಾ ಸಂಪನ್ಮೂಲಗಳಿದ್ದು ಬಜೆಟ್ ನಲ್ಲಿ ಕರಾವಳಿಗೆ ಏನಾದರೂ ಯೋಜನೆ ಸಿಗಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ.ಆದ್ದರಿಂದ ಕೈಗಾರಿಕಾ ಪ್ರಕೋಷ್ಟ ಈ ಬಜೆಟನ್ನು ಖಂಡಿಸುತ್ತದೆ ಎಂದರು.

Related posts

Leave a Reply