Header Ads
Breaking News

ಕರಾವಳಿಯಲ್ಲಿ ಎಚ್1ಎನ್1 ಆತಂಕ: ಜನರು ಮಾಡಬೇಕಿರುವುದೇನು?

ಕಳೆದ ವರ್ಷ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಕರಾವಳಿ ಜಿಲ್ಲೆಯ ಜನರನ್ನು ಭಯಭೀತರನ್ನಾಗಿಸಿದ್ದ ಎಚ್1ಎನ್1 ಸೋಂಕು ಈ ವರ್ಷ ಮಳೆಗಾಲ ಪೂರ್ವದಲ್ಲೇ ಕಾಣಿಸಿಕೊಂಡಿದೆ.

ಏಪ್ರಿಲ್ ತಿಂಗಳಿನವರೆಗೆ ದಕ್ಷಿಣ ಕನ್ನಡದಲ್ಲಿ 146 ಮಂದಿಗೆ ಮತ್ತು ಉಡುಪಿಯಲ್ಲಿ 225 ಜನರಿಗೆ ಸೋಂಕು ತಗುಲಿರುವ ಬಗ್ಗೆ ವರದಿಯಾಗಿದ್ದು ಆತಂಕ ಹೆಚ್ಚಿಸಿದೆ. ಕರಾವಳಿಗೆ ತಾಗಿಕೊಂಡಿರುವ ಶಿವಮೊಗ್ಗ, ಉತ್ತರಕನ್ನಡ ಮಲೆನಾಡು ಭಾಗದಲ್ಲಿ ಸೋಂಕಿತರ ಪ್ರಮಾಣ ಜಾಸ್ತಿಯಾಗಿದ್ದು, 11 ಮಂದಿ ಸಾವಿಗೀಡಾಗಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಹೆಚ್ಚಿನ ಮುಂಜಾಗ್ರತೆ ವಹಿಸಿದೆ.

ಉಡುಪಿಯಲ್ಲಿ 2017ರಲ್ಲಿ 523 ಪ್ರಕರಣ ಪತ್ತೆಯಾಗಿತ್ತು. ಬಳಿಕ ಇಳಿಮುಖವಾಗಿದ್ದು ಈ ವರ್ಷ ಮತ್ತೆ ಹೆಚ್ಚಳವಾಗಿದೆ. 2018ರಲ್ಲಿ 117, ಈ ವರ್ಷ ಮಾರ್ಚ್‍ವರೆಗೆ 170, ನಂತರ ದಿನಗಳಲ್ಲಿ ಏ.26ರವರೆಗೆ 225 ಪ್ರಕರಣ ಕಂಡು ಬಂದಿದೆ. ನಿರ್ದಿಷ್ಟವಾಗಿ ಎಚ್1ಎನ್1 ಸೋಂಕಿನಿಂದ ಯಾರೂ ಮೃತಪಟ್ಟಿಲ್ಲ. ಕ್ಯಾನ್ಸರ್ ಪೀಡಿತ 1 ಹಿರಿಯ ವ್ಯಕ್ತಿ, 4 ಮಂದಿ ವಿವಿಧ ರೋಗವಿದ್ದ ಹಿರಿಯರಲ್ಲಿ ಎಚ್1ಎನ್1 ಸೋಂಕು ಕಾಣಿಸಿಕೊಂಡು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕಳೆದ ವರ್ಷ ಕರ್ನಾಟಕದಾದ್ಯಂತ 1,733 ಸೋಂಕಿತರಲ್ಲಿ 87 ಮಂದಿ ಸಾವಿಗೀಡಾಗುವ ಮೂಲಕ ದೇಶದಲ್ಲಿ ಅತೀ ಹೆಚ್ಚು ಎಚ್1ಎನ್1 ಪ್ರಕರಣಗಳನ್ನು ಹೊಂದಿರುವ ರಾಜ್ಯದ ಪಟ್ಟಿಯಲ್ಲಿ ಕರ್ನಾಟಕ ಸ್ಥಾನ ಪಡೆದುಕೊಂಡಿತ್ತು. ಈ ವರ್ಷದ ಆರಂಭದಲ್ಲೇ ರಾಜ್ಯದಲ್ಲಿ 14 ಮಂದಿ ಮೃತಪಟ್ಟಿದ್ದಾರೆ.

ಬಿಟ್ಟುಬಿಟ್ಟು ಸುರಿಯುವ ಮಳೆ, ತಂಪು ಹವೆಯಂತಹ ವಾತಾವರಣ ಸಹಜವಾಗಿಯೇ ಸಾಂಕ್ರಾಮಿಕ ರೋಗಗಳಿಗೆ ಅವಕಾಶ ಒದಗಿಸುತ್ತದೆ. ನಿರಂತರ ಮಳೆ ಸುರಿಯುವ ಸಂದರ್ಭ ಇದರ ವೈರಸ್ ಬೆಳೆಯಲು ಸಾಧ್ಯವಾಗುವುದಿಲ್ಲ. ಅಧಿಕ ತಾಪಮಾನದಲ್ಲಿ ವೈರಸ್ ಬದುಕುವುದಿಲ್ಲ. ಬೇಸಿಗೆಯಲ್ಲೇ ವೈರಾಣು ಹೆಚ್ಚಿರುವುದರಿಂದ ಮಳೆ ಆರಂಭವಾಗಿ ವೈರಾಣು ಹರಡುವ ಭೀತಿಯೂ ಇದೆ.

Related posts

Leave a Reply

Your email address will not be published. Required fields are marked *