Header Ads
Header Ads
Breaking News

ಕರಾವಳಿಯಲ್ಲಿ ಕೊರಗಜ್ಜನಾ ಕಾರಣಿಕ. ಕಲಿಗಾಲದಲ್ಲೂ ಕೊರಗಜ್ಜನ ಪವಾಡ ಮತ್ತೆ ಸಾಬೀತು. ದೈವದ ಮೇಲಿನ ನಂಬುಗೆ ಮತ್ತಷ್ಟು ದೃಢ. ಕೊರಗಜ್ಜನ ಪವಾಡದ ಕುರಿತು ಇಂಟ್ರಸ್ಟಿಂಗ್ ಸ್ಟೋರಿ.

ಕರಾವಳಿಯ ಕೊರಗಜ್ಜನ ಕಾರಣಿಕ ಪದೆ ಪದೇ ಆಗುತ್ತಿರುತ್ತದೆ ಇಲ್ಲಿನ ಜನ ಅಪಾರವಾಗಿ ನಂಬುವ ದೈವ ಕೊರಗಜ್ಜ. ಕಲಿಗಾಲದಲ್ಲೂ ಕೊರಗಜ್ಜನ ಪವಾಡ ಮತ್ತೆ ಮತ್ತೆ ಸಾಬೀತಾಗುತ್ತಿರುವುದರಿಂದ ಈ ದೈವದ ಮೇಲಿನ ನಂಬುಗೆ ಮತ್ತಷ್ಟು ದೃಢವಾಗುತ್ತಾ ಬಂದಿದೆ. ಅಂತಹಾ ಕೊರಗಜ್ಜನನ್ನೇ ಕದ್ದವರ ಕಥೆ ಏನಾಯ್ತು? ಕೊರಗಜ್ಜನ ಪವಾಡದ ಕುರಿತು ಇಂಟರೆಸ್ಟಿಂಗ್ ಸ್ಟೋರಿ ಇದೆ ನೋಡಿಶಿವಾಂಶ ಸಂಭೂತ ಕೊರಗಜ್ಜ, ಕರಾವಳಿಗರ ಇಷ್ಟ ದೈವ. ಏನೇ ಕಷ್ಟ ಬರಲಿ, ಮನೆಯ ಸ್ವತ್ತು ಕಳ್ಳತನವಾಗಲಿ, ಮಕ್ಕಳಿಗೆ ಕಾಯಿಲೆ ಬಾಧಿಸಲಿ ಕೊರಗಜ್ಜನಿಗೊಂದು ವೀಳ್ಯದೆಲೆಯ ಹರಕೆ ಹೊತ್ತರೆ ಸಾಕು, ಕ್ಷಣಮಾತ್ರದಲ್ಲಿ ಸಮಸ್ಯೆ ಬಗೆಹರಿಯುತ್ತೆ ಅನ್ನೋದು ನಂಬಿಕೆ. ಇಂತಹಾ ಕೊರಗಜ್ಜನ ವಿಗ್ರಹವೇ ಗುಡಿಯಿಂದ ಕಾಣೆಯಾದ ಘಟನೆ ಉಡುಪಿ ಜಿಲ್ಲೆ ಹಿರಿಯಡ್ಕದ ಪಡ್ಡಾಮ್ ಎಂಬಲ್ಲ ನಡೆದಿದೆ. ಹೌದು ಭಕ್ತಿಯಿಂದ ನಂಬುವ ದೈವಮೂರ್ತಿಯೇ ಕಾಣೆಯಾದರೆ ಜನರ ಪಾಡೇನು? ಅಲ್ವಾ. ಹಾಗಾಗಿ ಪಡ್ಡಾಮ್ ಎಂಬ ಹಳ್ಳಿಯ ಜನರು ದೇವರಿಗೇ ಒಂದು ಸವಾಲಿಟ್ರು. ನಿನ್ನ ಕಾರಣಿಕವನ್ನು ನೀನು ತೋರಿಸದೇ ಹೋದ್ರೆ, ನಾವು ಇನ್ನು ನಿನಗೆ ಪೂಜೆ ಮಾಡಲ್ಲ. ನಿನ್ನ ಮೂರ್ತಿ ಕದ್ದವರು ಯಾರೆಂದು ನೀನೇ ಹುಡುಕಬೇಕು ಅಂತ ದೂರುಕೊಟ್ರು. ಪವಾಡ ಏನಾಯ್ತು ಗೊತ್ತಾ? ಮರುದಿನವೇ ಕೊರಗಜ್ಜನ ವಿಗ್ರಹವನ್ನು ಕದ್ದವರು, ಗುಡಿಯ ಹೊರ ಭಾಗದಲ್ಲಿ ಗೋಣಿ ಚೀಲದಲ್ಲಿ ಬಿಟ್ಟು ಹೋಗಿದ್ದಾನೆಜನರಿಗೆ ಕೊರಗಜ್ಜನ ಪವಾಡ ಕಂಡು ವಿಸ್ಮಯವಾಗಿದೆ. ಪೊಲೀಸರಿಗೆ ದೂರು ನೀಡುವ ಮೊನ್ನ ಕೊರಗಜ್ಜನಿಗೆ ದೂರು ನೀಡಿದ್ದ ಗ್ರಾಮಸ್ಥರಿಗೆ ದೈವದ ಮೇಲಿನ ಭರವಸೆ ಮತ್ತಷ್ಟು ಹೆಚ್ಚಾಗಿದೆ. ಕೊರಗಜ್ಜನ ಗುಡಿಯನ್ನು ಶುದ್ಧಮಾಡಿ ಮತ್ತೊಮ್ಮೆ ಪಂಚಲೋಹದ ಮೂರ್ತಿ ಪ್ರತಿಷ್ಟಾಪಿಸಲು ತಯಾರಿ ನಡೆಸಿದ್ದಾರೆ ಸನ್ನಿಧಾನದಲ್ಲಿ ದರ್ಶನ ಸೇವೆ ನಡೆಸಲು ಮುಂದಾಗಿದ್ದಾರೆ. ಹಿರಿಯಡ್ಕ ಪೊಲೀಸರು ಕೂಡಾ ನಮ್ಮ ಕೆಲಸವನ್ನು ದೈವವೇ ಮಾಡಿದೆ ಎಂಬ ಶೃದ್ಧೆಯನ್ನು ಪ್ರಕಟಿಸಿದ್ದಾರೆ. ಬಡವರ ದೈವ ಕೊರಗಜ್ಜ, ತನ್ನ ಪವಾಡಗಳಿಂದ ಮಂಗಳೂರು ಉಡುಪಿ ಭಾಗದ ಜನರ ಮನಸ್ಸಲ್ಲಿ ಮಹತ್ವದ ಸ್ಥಾನ ಹೊಂದಿದ್ದಾನೆ. ಇದೀಗ ಪಡ್ಡಾಂ ದೈವಸ್ಥಾನದಲ್ಲಿ ಕೊರಗಜ್ಜ ಕುತೂಹಲದ ಕೇಂದ್ರಬಿಂದು ಎನಿಸಿದ್ದಾನೆ.ನಂಬಿಕೆಗೂ, ಮೂಢನಂಬಿಕೆಗೂ ತೆಳುವಾದ ವ್ಯತ್ಯಾಸ ಇರುತ್ತೆ. ದೇವರ ಭಯ ಎಷ್ಟೋ ಜನರ ಮನಪರಿವರ್ತನೆಗೆ ಕಾರಣವಾಗಿದೆ. ಕೊರಗಜ್ಜನ ವಿಗ್ರಹ ಕದ್ದವನಿಗೂ ದೇವರ ಭಯವಾಗಿರಬೇಕು. ಮನ ಪರಿವರ್ತನೆಗೆ ಕಾರಣವಾದ ಈ ಪ್ರಕರಣ ಪವಾಡ ಮತ್ತು ಪರಿವರ್ತನೆಗೆ ಉತ್ತಮ ಉದಾಹರಣೆಯಾಗಿದೆ.

Related posts

Leave a Reply