Header Ads
Header Ads
Breaking News

ಕರಾವಳಿಯಲ್ಲಿ ಗರಿಗೆದರಿದ ಪುಟಾಣಿ ಬಾಲ-ಬಾಲೆಯರ ಹುಲಿ ಹೆಜ್ಜೆ

ಹುಲಿ ವೇಷದ ಹೆಜ್ಜೆಗೆ ತಲೆದೂಗದವರೇ ಇಲ್ಲ…ಅದರಲ್ಲೂ ಯುವಕರನ್ನೂ ನಾಚಿಸುವ ರೀತಿಯಲ್ಲಿ ಪುಟಾಣಿ ಬಾಲ-ಬಾಲೆಯರ ನರ್ತನ ಸಹಿತ ನಿಬ್ಬೆರಗಾಗಿಸುವ ಸಾಹಸ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಬಾರೀ ಪ್ರಶಂಶೆ ವ್ಯಕ್ತವಾಗಿದೆ. ಅಷ್ಟಕ್ಕೂ ಈ ದೃಶ್ಯ ಕಂಡು ಬಂದಿದ್ದು ಕಟಪಾಡಿಯ ಶ್ರೀಕ್ಷೇತ್ರ ಪೇಟೆಬೆಟ್ಟು ಹಾಗೂ ಸಂಗಮ ಪ್ರೇಂಡ್ಸ್ ಆಯೋಜಿಸಿದ ಪುಟಾಣಿಗಳ ಹುಲಿವೇಷ ನರ್ತನ ನಡೆದಿರುವುದು ಕಾಪು ವಿದ್ಯಾನಿಕೇತನ ವಿದ್ಯಾಸಂಸ್ಥೆಯಲ್ಲಿ. ಯುವಕರಿಗೆ ತಾವೇನೂ ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಡೋಲು-ತಾಸೆಯ ಸದ್ದಿಗೆ ಹೆಜ್ಜೆ ಹಾಕಿದ ಪುಟಾಣಿಗಳು, ವಿವಿಧ ಸಾಹಸ ಪ್ರರ್ದಶನವನ್ನು ಮಾಡುವ ಮೂಲಕ ಜನರ ಮನಸ್ಸನ್ನು ಗೆದ್ದಿರುವುದು ನಿಜ. ಅದರಲ್ಲೂ ಪುಟಾಣಿಯೋರ್ವ ತನ್ನ ಎತ್ತರಕ್ಕಿಂತಲೂ ಅದೇಷ್ಟೋ ಪಟ್ಟು ಉದ್ದದ ಮರದ ಕಾಲು ಕಟ್ಟಿಕೊಂಡು ಎಂಟ್ರಿ ನೀಡುತ್ತಿದಂತೆ, ಸಿಳ್ಳೆ-ಚಪ್ಪಾಳೆಯ ಸದ್ದು ಮುಗಿಲು ಮುಟ್ಟುವಂತ್ತಿತ್ತು. ಕೇವಲ ದೇವರ ಸೇವೆಗೆ ಎಂಬುದಾಗಿ ಹಾಕಿದ ಈ ಹುಲಿವೇಷಕ್ಕೆ ಬಹಳಷ್ಟು ದಾನಿಗಳು ಸ್ವಯಂ ಇಚ್ಚೆಯಿಂದ ಮುಂದೆ ಬಂದು ಧನ ಸಹಾಯ ನೀಡಿದ್ದಾರೆ ಎಂಬುದಾಗಿ ಈ ತಂಡದ ಉಸ್ತುವಾರಿ ನೋಡುತ್ತಿದ್ದವರೋರ್ವರು ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *