Header Ads
Breaking News

ಕರಾವಳಿಯಲ್ಲಿ ತಂಪೆರೆದ ಮಳೆರಾಯ : ಉಡುಪಿ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ

ಉಡುಪಿಯಲ್ಲಿ ಮಳೆರಾಯ ತಂಪೆರೆದಿದ್ದಾನೆ.ತಡರಾತ್ರಿ ದಿಢೀರ್ ಮಳೆಯಾಗಿದ್ದು ,ಹಗಲು ಹೊತ್ತೂ ಮಳೆಮುಂದುವರೆದಿದೆ. ಮುಂಜಾನೆಯಿಂದ ನಗರಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ನೆಲೆಸಿದೆ.ಫೆಬ್ರವರಿ ಅಂತ್ಯಕ್ಕೆ ಸೆಖೆಯಿಂದ ಬಳಲುತ್ತಿದ್ದ ಜನತೆಗೆ ಮುಂಗಾರು ಪೂರ್ವ ಮಳೆ ಪುಳಕ ನೀಡಿದ್ದು ಸುಳ್ಳಲ್ಲ..ಕಳೆದ ಕೆಲ ದಿನಗಳಿಂದ ಕೃಷ್ಣನಗರಿಯಲ್ಲಿ ವಿಪರೀತ ಸೆಖೆಯಿತ್ತು..ಮುಂಜಾನೆಯ ಮಳೆ ರಸ್ತೆ ಪಕ್ಕದ ಮಣ್ಣನ್ನು ಕೊಚ್ಚಿ ರಾಡಿ ಎಬ್ಬಿಸಿದ್ದು ವಾಕಿಂಗ್ ಪ್ರಿಯರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಯಿತು.ಸದ್ಯ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ನೆಲೆಸಿದೆ.

Related posts

Leave a Reply

Your email address will not be published. Required fields are marked *