Header Ads
Header Ads
Breaking News

ಕರಾವಳಿಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು:ಸಚಿವ ಪುಟ್ಟರಾಜು

ಉಡುಪಿಯ ಕಿನ್ನಿಮುಲ್ಕಿಯಲ್ಲಿರುವ ಜೆಡಿಎಸ್ ಕಚೇರಿಗೆ ರಾಜ್ಯದ ಸಣ್ಣ ನೀರಾವತಿ ಸಚಿವ ಪುಟ್ಟರಾಜು ಅವರು ಭೇಟಿ ನೀಡಿದರು. ಜೆಡಿಎಸ್ ವತಿಯಿಂದ ಸನ್ಮಾನ ಸ್ವೀಕರಿಸಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳಿದರು. ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು ಉಡುಪಿಯ ಕಿನ್ನಿಮುಲ್ಕಿಯಲ್ಲಿರುವ ಜೆಡಿಎಸ್ ಕಚೇರಿಗೆ ಭೇಟಿ ನೀಡಿದರು. ಜಿಲ್ಲಾ ಜಿಎಡಿಎಸ್ ವತಿಯಿಂದ ಜಿಲ್ಲಾದ್ಯಕ್ಷ ಯೋಗೀಶ್ ಶೆಟ್ಟಿ ಸಚಿವ ಪುಟ್ಟರಾಜು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.ಈಗಾಗಲೇ ಜಿಲ್ಲೆಯಲ್ಲಿ ಎಲ್ಲಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಈ ಮೂಲಕ ಇತರ ಪಕ್ಷಗಳಿಗೆ ಪ್ರತಿಸ್ಪರ್ದೆ ನೀಡಿದ್ದೇವೆ. ಪಕ್ಷ ಸಂಘಟನೆಗೆ ಒತ್ತನ್ನು ನೀಡುವ ಹಿನ್ನಲೆಯಲ್ಲಿ ಸಚಿವರ ಬೆಂಬಲವನ್ನು ಜಿಲ್ಲಾದ್ಯಕ್ಷ ಯೋಗೀಶ್ ಶೆಟ್ಟಿ ಕೋರಿದರು.ಸಚಿವ ಸಿ.ಎಸ್ ಪುಟ್ಟರಾಜು ಮಾತನಾಡಿ ಈ ಭಾಗದಲ್ಲಿ ಪಶ್ಚಿಮ ವಾಹಿನಿ ಯೋಜನೆಗಳ ಅನುಷ್ಟಾನಕ್ಕೆ ಸರಕಾರ ನಿರ್ದಾರ ಮಾಡಿದೆ. ನನ್ನ ಇಲಾಖೆಯಿಂದಲೇ 1600ಕೋಟಿ ರೂ ಈ ಯೋಜನೆಗೆ ಬಿಡುಗಡೆಯಾಗಲಿದೆ. ಮೊದಲ ಹಂತದಲ್ಲಿ 400ಕೋಟಿ ರೂ ಬಿಡುಗಡೆಯಾಗಲಿದ್ದು ಟೆಂಡರ್ ಕರೆಯಲಾಗಿದೆ . ಈ ಮೂಲಕ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನ ಕುಮಾರಸ್ವಾಮಿಯವರ ನೇತೃತ್ವದ ಸರಕಾರ ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತನ್ನ ನೀಡಲಾಗುವುದು.ಉಡುಪಿಗೆ ಹೆಚ್ಚು ಭೇಟಿ ನೀಡಿ ಸಲಹೆಗಳನ್ನು ನೀಡುವ ಕಾರ್ಯವನ್ನ ಮಾಡಲಿದ್ದೇನೆ ಅಂತ ಸಚಿವ ಪುಟ್ಟರಾಜು ಹೇಳಿದರು. ಈ ಸಂದರ್ಬದಲ್ಲಿ ಪಕ್ಷದ ಮುಖಂಡರಾದ ಜಯಕುಮಾರ್ ಪರ್ಕಳ, ವಾಸುದೇವರಾವ್, ಶಾಲಿನಿ ಶೆಟ್ಟಿ,ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply